ಪ್ರಜಾಸ್ತ್ರ ಸುದ್ದಿ
ಉಡುಪಿ(Udupi): ಪ್ರವಾಸ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿ ಪ್ರಕೃತಿ ಮಡಿಲಲ್ಲಿ ಎಂದರೆ ಇನ್ನು ಹೆಚ್ಚು ಖುಷಿಯಾಗುತ್ತೆ. ಇದರ ಜೊತೆಗೆ ಆರ್ಥಿಕ ಲೆಕ್ಕಾಚಾರ ಶುರುವಾಗುತ್ತೆ. ಹೊರ ರಾಜ್ಯ, ವಿದೇಶಗಳಿಗೆ ಹೋಗಲು ಆಗದವರು ನಮ್ಮ ನಾಡಿನಲ್ಲಿರುವ ಪ್ರವಾಸಿ(Tour) ತಾಣಗಳಿಗೆ ಭೇಟಿ ನೀಡಿ ಮಳೆಗಾಲವನ್ನು(Rainy Season) ಎಂಜಾಯ್ ಮಾಡಬಹುದು. ಅಂತಹ ತಾಣಗಳಲ್ಲಿ ಕುಂದಾಪುರ ತಾಲೂಕಿನ ಬೈಂದೂರು ಸಹ ಒಂದಾಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರ ಕಣ್ಮನ ಸೆಳೆಯುತ್ತೆ.
ಕುಂದಾಪುರದಿಂದ ಕೇವಲ 32 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿನ ದೇವಾಲಗಳು, ಸೋಮವೇಶ್ವರ(Beach) ಬೀಚ್, ನೇಸರ ಧಾಮ, ಕೋಸಳ್ಳಿ ಜಲಪಾತ ನೋಡಿಕೊಂಡು ಬರಬಹುದು. ಉಕ್ಕಿ ಹರಿಯುವ ಜಲಪಾತ, ಕಡಲ ಕಿನಾರೆಯ ಅಲೆಗಳು ಸೊಬಗು, ಹಚ್ಚ ಹಸರಿನ ಮನರಾಶಿ ಖಂಡಿತ ಮುದ ನೀಡುತ್ತವೆ. ಇಲ್ಲಿನ ಸುತ್ತಮುತ್ತ ಪ್ರದೇಶದ ಬಗ್ಗೆ ಮತ್ತಷ್ಟು ಮಾಹಿತಿ ಪಡೆದು ಪ್ರವಾಸ ಮಾಡಿದರೆ ಇನ್ನೊಂದಿಷ್ಟು ಸುತ್ತಾಟ ನಡೆಸಬಹುದು.
ಈ ಪ್ರದೇಶಕ್ಕಿದೆ ಪೌರಾಣಿಕ ಹಿನ್ನಲೆ: ಈ ನೆಲದಲ್ಲಿನ ಪ್ರತಿಯೊಂದು ವಿಶೇಷ ಕ್ಷೇತ್ರಗಳಿಗೆ ತನ್ನದೆಯಾದ ಹಿನ್ನಲೆಯಿದೆ. ಹೀಗಾಗಿ ಅವುಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಕೆಲವೊಂದು ಇತಿಹಾಸವಾಗಿ ಹೋಗಿವೆ. ಬಿಂದುಋಷಿ ಮಹರ್ಷಿಗಳು ಇಲ್ಲಿ ತಪಸ್ಸು ಮಾಡಿದ್ದರು ಎನ್ನುವ ಕಾರಣಕ್ಕೆ ಬಿಂದುಪುರ, ಬಿಂದುನಾಡು, ಬಿಂದೂರು ಎಂದು ಕರೆಯಲಾಯಿತು. ಕಾಲಗಳು ಉರುಳಿದಂತೆ ಅದು ಬೈಂದೂರು(Byndoor) ಆಯ್ತು. ಮಲೆನಾಡು, ಕರಾವಳಿ ಭಾಗದ ಕಡೆ ಏನಾದರೂ ಪ್ರವಾಸದ(Trip) ಪ್ಲಾನ್ ಮಾಡಿದರೆ ಬೈಂದೂರಿಗೆ ಒಂದು ವಿಜಿಟ್ ಹಾಕಬಹುದು.