Ad imageAd image

ಸಿಎಸ್ಕೆಗೆ 204 ರನ್ ಗಳ ಗುರಿ ನೀಡಿದ ಎಲ್ಎಸ್ ಜಿ

Nagesh Talawar
ಸಿಎಸ್ಕೆಗೆ 204 ರನ್ ಗಳ ಗುರಿ ನೀಡಿದ ಎಲ್ಎಸ್ ಜಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಚೆನ್ನೈ(Chennai): ಇಲ್ಲಿನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎಲ್ಎಸ್ ಜಿ ಹಾಗೂ ಸಿಎಸ್ಕೆ ನಡುವಿನ ಪಂದ್ಯ ಸಖತ್ ಆಗಿದೆ. ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಎಲ್ಎಸ್ ಜಿ ಆರಂಭದಲ್ಲಿ ಅಬ್ಬರಿಸಿತು. ಜೋಶ್ ಇಂಗ್ಲಿಷ್, ಮಿಚಲ್ ಮಾರ್ಷ್ ಜೋಡಿ ಮೊದಲ ಪವರ್ ಪ್ಲೇ ನಲ್ಲಿ 91 ರನ್ ಗಳಿಸಿತು.

ಇಂಗ್ಲಿಷ್ 33 ಬೌಲ್ ಗಳಲ್ಲಿ 85 ಹಾಗೂ ಶಹಬಾಜ್ ಅಹ್ಮದ್ ಅಜೇಯ 43 ರನ್ ಗಳಿಸಿದರು. ಆದರೆ ಮಿಚಲ್ ಮಾರ್ಷ್ 10, ಪೂರಾನ್ 1, ರಿಷಬ್ ಪಂತ್ 15, ಮಾರ್ಕಂ 6, ರಘುವಂಶಿ 18, ಹಿಮಂತ್ ಸಿಂಗ್ 17 ರನ್ ಗಳಿಸಿದರು. ಆರಂಭಿಕ ಜೋಡಿಯ ಅಬ್ಬರ ನೋಡಿದರೆ 250ಕ್ಕಿಂತ ಹೆಚ್ಚು ರನ್ ಆಗಬೇಕಿತ್ತು. ಇಂಗ್ಲಿಷ್ ವಿಕೆಟ್ ಬಳಿಕ ಯಾರೂ ಹೆಚ್ಚು ಹೊತ್ತು ನಿಲ್ಲದ ಪರಿಣಾಮ 8 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಸಿಎಸ್ಕೆ ಓವರ್ ಟನ್ 3, ಅನ್ಸುಲ್ ಕಂಬೋಜ್ 2, ನೂರ್ ಅಹ್ಮದ್ 1 ವಿಕೆಟ್ ಪಡೆದರು.

WhatsApp Group Join Now
Telegram Group Join Now
Share This Article