Ad imageAd image

ಹಣವಿಲ್ಲ ಎಂದು ಹೇಳುತ್ತಾ ಜನರಿಗೆ ಮೋಸ ಮಾಡಬೇಡಿ: ಸ್ಟಾಲಿನ್

Nagesh Talawar
ಹಣವಿಲ್ಲ ಎಂದು ಹೇಳುತ್ತಾ ಜನರಿಗೆ ಮೋಸ ಮಾಡಬೇಡಿ: ಸ್ಟಾಲಿನ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಚೆನ್ನೈ(Chennai): ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ವಿಜಯ್ ಜೋಸೆಫ್, ಹಿಂದಿನ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 10 ಲಕ್ಷ ಕೋಟಿ ರೂಪಾಯಿ ಸಾಲದ ಹೊರೆ ಹೊರೆಸಿದ್ದಾರೆ. ಕೆಲಸ ಮಾಡಲು ಸ್ವಲ್ಪ ಸಮಯ ಕೊಡಿ. ರಾಜ್ಯದ ಹಣಕಾಸು ಪರಿಸ್ಥಿತಿ ಶ್ವೇತಪತ್ರ ಹೊರಡಿಸುತ್ತೇನೆ ಎಂದಿದ್ದರು. ಇದಕ್ಕೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ, ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್, ಹಣವಿಲ್ಲ ಎಂದು ನಿಮಗೆ ನಂಬಿ ಮತ ಹಾಕಿರುವ ಜನರಿಗೆ ಮೋಸ ಮಾಡಬೇಡಿ. ಸರ್ಕಾರದಲ್ಲಿ ಹಣ ಇದೆ. ಆಡಳಿತ ನಡೆಸುವ ಸಾಮರ್ಥ್ಯ ಬೇಕು ಎಂದಿದ್ದಾರೆ.

ಫೆಬ್ರವರಿಯಲ್ಲಿ ಮಂಡಿಸಲಾದ ಬಜೆಟ್ ನಲ್ಲಿ ತಮಿಳುನಾಡಿನ ಆರ್ಥಿಕ ಪರಿಸ್ಥಿತಿ ಬಗ್ಗೆ ಹೇಳಲಾಗಿದೆ. ಅದು ನಿಮಗೆ ಗೊತ್ತಿಲ್ಲವೇ? ಇದಾದ ಬಳಿಕವೇ ನೀವು ಜನರಿಗೆ ಭರವಸೆ ನೀಡಿದ್ದೀರಿ. ಮತ ಹಾಕಿದ ಜನರಿಗೆ ಮೋಸ ಮಾಡಬೇಡಿ. ವಿಷಯಾಂತರ ಮಾಡಬೇಡಿ. ಕೋವಿಡ್ 19, ಪ್ರವಾಹ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಂತಹ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ಸರ್ಕಾರ ಐದು ವರ್ಷಗಳಲ್ಲಿ ಜನಕಲ್ಯಾಣ ಯೋಜನೆಗಳನ್ನು ತಂದಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಸಿಎಂ ವಿಜಯಗೆ ತಿರುಗೇಟು ನೀಡಿದ್ದಾರೆ.

WhatsApp Group Join Now
Telegram Group Join Now
Share This Article