Ad imageAd image

22ನೇ ಮುಖ್ಯಮಂತ್ರಿ ಆಗಿ ಸಿ.ವಿಜಯ್ ಜೋಸೆಫ್ ಪ್ರಮಾಣ ವಚನ

Nagesh Talawar
22ನೇ ಮುಖ್ಯಮಂತ್ರಿ ಆಗಿ ಸಿ.ವಿಜಯ್ ಜೋಸೆಫ್ ಪ್ರಮಾಣ ವಚನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಚೆನ್ನೈ(Chennai): ಇಲ್ಲಿನ ನೆಹರು ಮೈದಾನದಲ್ಲಿ ಆಯೋಜಿಸಿದ್ದ ಪ್ರಮಾಣ ವಚನ ಬೋಧನೆ ಕಾರ್ಯಕ್ರಮದಲ್ಲಿ ಟಿವಿಕೆ ಮುಖ್ಯಸ್ಥ, ನಟ ಸಿ.ವಿಜಯ್ ಜೋಸೆಫ್ ಅವರು 22ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವೇದಿಕೆ ಹಂಚಿಕೊಂಡರು.

ಇದೇ ವೇಳೆ ಎನ್.ಆನಂದ, ಅಧವ್ ಅರ್ಜುನ್, ಡಾ.ಕೆ.ಜೆ ಅರುಣರಾಜ್, ಪಿ.ವೆಂಕಟರಮಣ, ಟಿ.ಕೆ ಪ್ರಭು, ಸೆಲ್ವಿ.ಎಸ್ ಕೀರ್ತನ್, ಕೆ.ಎ ಸೆನ್ ಗೊಟ್ಟಿಯನ್, ಆರ್.ನಿರ್ಮಲ್ ಕುಮಾರ್, ರಾಜಾಮೋಹನ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ನೂತನ ಸಿಎಂ ವಿಜಯ್ ಜೋಸೆಫ್ ಹೆತ್ತವರು, ಚಿತ್ರರಂಗದ ಅವರ ಸ್ನೇಹಿತರು ಭಾಗವಹಿಸಿದ್ದರು. ವಿಜಯ್ ಆಪ್ತೆ ನಟಿ ತ್ರಿಷಾ ಸಹ ಉಪಸ್ಥಿತರಿದ್ದರು.

ಇದೆ ವೇಳೆ 200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರ ರಕ್ಷಣೆಗೆ ವಿಶೇಷ ಪಡೆ, ಡ್ರಗ್ಸ್ ಮಟ್ಟ ಹಾಕುವುದು ಸೇರಿದಂತೆ ಹಲವು ಯೋಜನೆಗಳನ್ನು ಇದೆ ವೇಳೆ ಘೋಷಿಸಿದ್ದಾರೆ. ನಿಜವಾದ ಜಾತ್ಯತೀತ ಹಾಗೂ ಸಾಮಾಜಿಕ ನ್ಯಾಯದ ಹೊಸ ಯುಗ ಈಗ ಆರಂಭವಾಗಿದೆ. ನಾನು ಯಾವುದೇ ರಾಜಮನೆತನದಿಂದ ಬಂದವನಲ್ಲ. ಜನರೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಮೋಸ ಮಾಡುವುದಿಲ್ಲ. ಡಿಎಂಕೆ 10 ಲಕ್ಷ ಕೋಟಿ ರೂಪಾಯಿ ಸಾಲದ ಹೊರೆಯನ್ನು ಹೊರೆಸಿದೆ ಎಂದರು.

WhatsApp Group Join Now
Telegram Group Join Now
Share This Article