Ad imageAd image

ಬಿಜೆಪಿ ಮುಖಂಡನ ಹತ್ಯೆ: ಅಪರಾಧಿಗಳಿಗೆ ಗಲ್ಲು ಶಿಕ್ಷೆ

Nagesh Talawar
ಬಿಜೆಪಿ ಮುಖಂಡನ ಹತ್ಯೆ: ಅಪರಾಧಿಗಳಿಗೆ ಗಲ್ಲು ಶಿಕ್ಷೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಗಂಗಾವತಿ(Gangavati): ಕಳೆದ 2025ರಲ್ಲಿ ಕೊಪ್ಪಳ ರಸ್ತೆಯಲ್ಲಿ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ ಎಂಬುವರ ಕೊಲೆ ಪ್ರಕರಣ ಸಂಬಂಧ 6 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಗಂಗಾಧರ ಗೌಳಿ, ವಿಜಯ್ ಅಲಿಯಾಸ್ ಮೈಲಾರಿ, ರವಿ ಸಣ್ಣಬಸವರಾಜ, ಭೀಮ ಅಲಿಯಾಸ್ ಭರತ, ಸಲೀಂ, ಧನರಾಜ ಅನ್ನೋ 6 ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ಗುರುವಾರ ಪ್ರಕಟಿಸಲಾಗಿದೆ. 2025 ಅಕ್ಟೋಬರ್ 8ರ ರಾತ್ರಿ ವೆಂಕಟೇಶ ಬೈಕ್ ಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ. ಕೆಳಗೆ ಬಿದ್ದ ಅವರ ಮೇಲೆ ಮಚ್ಚು, ಲಾಂಗ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು.

WhatsApp Group Join Now
Telegram Group Join Now
Share This Article