ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಪತ್ನಿಯನ್ನು ಹರಿತವಾದ ಆಯುಧದಿಂದ ಹತ್ಯೆ ಮಾಡಿ ತನ್ನ ಮಗುವಿನೊಂದಿಗೆ ಬಾವಿಗೆ ಹಾರಿ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪರಾಗಿದೆ. ಅಫಜಲಪುರ ತಾಲೂಕಿನ ಮದರಾ.ಕೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮಿಪುತ್ರ ಎಂಬಾತ ತನ್ನ ಪತ್ನಿ ಅಂಜಲಿಯನ್ನು ಹತ್ಯೆ ಮಾಡಿದ್ದಾನೆ.
ಪತ್ನಿಯ ಹತ್ಯೆ ಬಳಿಕ ಮಗುವನ್ನು ಎತ್ತಿಕೊಂಡು ಹೋಗಿ ಹತ್ತಿರದ ಬಾವಿಗೆ ಹಾರಿದ್ದಾನೆ. ಇದನ್ನು ನೋಡಿದ ಜನರು ಕೂಡಲೇ ಮಗುವನ್ನು ರಕ್ಷಿಸಿದ್ದಾರೆ. ಲಕ್ಷ್ಮಿಪುತ್ರ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ರೇವೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾವ ಕಾರಣಕ್ಕೆ ಪತ್ನಿಯ ಕೊಲೆ ಮಾಡಿದ, ಏನು ಇದರ ಹಿನ್ನಲೆ ಅನ್ನೋದರ ತನಿಖೆ ನಡೆಸಿದ್ದಾರೆ.




