ಪ್ರಜಾಸ್ತ್ರ ಸುದ್ದಿ
ಕೊಪ್ಪಳ(Koppala): ಯಾರು ಮನೆಗೆ ಬಂದು ಸಚಿವ ಸ್ಥಾನ ಕೊಡುವುದಿಲ್ಲ. ದೆಹಲಿಗೆ ಹೋಗಿ ನಾನೇ ಸಚಿವ ಸ್ಥಾನ ಕೇಳಿದ್ದೇನೆ. ಸತತ ಮೂರು ಬಾರಿ ಶಾಸಕನಾಗಿದ್ದು, ನನಗೂ ಸಚಿವ ಸ್ಥಾನ ನೀಡಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ. ಮಂಗಳವಾರ ತಾಲೂಕಿನ ಹುಲಿಗಿಯಲ್ಲಿ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಅಥವ ಸಚಿವ ಸಂಪುಟ ವಿಸ್ತರಣೆ ಏನೇ ಆಗಬೇಕಾದರೂ ಪಕ್ಷದ ನಾಯಕ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಎಐಸಿಸಿ ಅಧ್ಯಕ್ಷರು ನಮ್ಮ ರಾಜ್ಯದವರಿದ್ದಾರೆ. ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದೇವೆ. ನಮ್ಮ ಹೈಕಮಾಂಡ್ ಗಟ್ಟಿಯಾಗಿದೆ. ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಸೇರಿ ಸಚಿವರು, ಶಾಸಕರು ಸಿಎಂ ಜೊತೆಗಿದ್ದೇವೆ ಅಂತಾ ಹೇಳಿದರು.




