ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಿಲಿಕಾನ್ ಸಿಟಿಯಲ್ಲಿ ಬುಧವಾರ ಸುರಿದ ಅಪಾರ ಪ್ರಮಾಣದ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಒಂದು ಕಡೆ ಗೋಡೆ ಕುಸಿದು 7 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಂದು ಕಡೆ ಸಾವಿರಾರು ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ. ಮಳೆ ನೀರು ಸರಿಯಾಗಿ ಹೋಗುವುದಕ್ಕೆ ಸೂಕ್ತ ವ್ಯವಸ್ಥೆ ಮಾಡದ ಪರಿಣಾಮ ಇಂತಹ ಅನಾಹುತಗಳು ಪದೆಪದೆ ಆಗುತ್ತಿವೆ.
ಆಲಿಕಲ್ಲು ಸಮೇತ ಸುರಿದ ಭಾರಿ ಮಳೆಯಿಂದ ನಗರದ ಹಲವು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿವೆ. ಕೊಳಗೇರಿ ಹಾಗೂ ತಗ್ಗು ಪ್ರದೇಶಗಳಲ್ಲಿ ಸುಮಾರು 750ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿವೆ. ವಿನೋಬಾ ನಗರದಲ್ಲಿ 300 ಮನೆ, ಬಂಗಿ ಕಾಲೋನಿಯಲ್ಲಿ 180 ಮನೆ, ನರಸಿಂಹ ಕಾಲೋನಿಯಲ್ಲಿ 130 ಮನೆಯೊಳಗೆ ಮಳೆ ನೀರು ನುಗ್ಗಿವೆ. ಇನ್ನು 170 ಮರಗಳು ಉರುಳಿ ಬಿದ್ದಿವೆ. 408ಕ್ಕೂ ಹೆಚ್ಚು ಮರಗಳ ರೆಂಬೆ, ಕೊಂಬೆಗಳು ಮುರಿದಿವೆ. ಸಂಚಾರ ಅಸ್ತವ್ಯವಸ್ಥೆಯಿಂದಲೂ ಜನರು ಪರದಾಡಿದರು.




