ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ಮೇ 15ಕ್ಕೆ ನಮ್ಮ ನಾಯಕನ ಹುಟ್ಟು ಹಬ್ಬವಿದೆ. ಅಂದು ಉಡುಗರೆ ಸಿಗಲಿದೆ. ಮೇ 15ಕ್ಕೆ ಡಿ.ಕೆ ಶಿವಕುಮಾರ್ ಅವರು ಸಿಎಂ ಆಗೋದು ಫಿಕ್ಸ್ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ಈ ಹಿಂದೆ ಎರಡ್ಮೂರು ದಿನಾಂಕ ಹೇಳಿದ್ದೆ. ವಿವಿಧ ಕಾರಣಕ್ಕೆ ಆಗಲಿಲ್ಲ. ಇದು ಅಂತಿಮ ದಿನಾಂಕವಾಗಿದೆ ಎಂದರು.
ಈ ಅವಧಿಯಲ್ಲಿ ಡಿ.ಕೆ ಶಿವಕುಮಾರ್ ಅವರು ಸಿಎಂ ಆಗಬೇಕು. ಅವರ ನಾಯಕತ್ವದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳಾಗಬೇಕು ಅನ್ನೋದು ಎಲ್ಲರ ಬಯಕೆ ಅಂತಾ ಹೇಳಿದರು. ಸಿದ್ದರಾಮಯ್ಯನವರನ್ನೆ ಮುಖ್ಯಮಂತ್ರಿಯಾಗಿ ಮುಂದುವರೆಸುವಂತೆ ಹೇಳಿದ್ದೇವೆ ಎಂದಿರುವ ಶಾಸಕ ಕೆ.ಎನ್ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಇವರು, ರಾಜಕಾರಣದಲ್ಲಿ ಬದಲಾವಣೆ ಬಯಸಿ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ರಾಜಕೀಯದಲ್ಲಿ ಅಭಿಪ್ರಾಯ ಬೇದ ಸಹಜ ಎಂದರು.




