ಪ್ರಜಾಸ್ತ್ರ ಸುದ್ದಿ
ಆಲಮೇಲ(Alamela): 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ವಿಭೂತಿಹಳ್ಳಿಯ ಸರ್ಕಾರಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯು ಶೇಕಡ 100 ರಷ್ಟು ಫಲಿತಾಂಶ ದಾಖಲಿಸಿದೆ. ಈ ಮೂಲಕ ಇಲ್ಲಿನ ವಿದ್ಯಾರ್ಥಿಗಳು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯ ಒಟ್ಟು 24 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿನಿ ಪದ್ಮಾವತಿ ತಳಕೇರಿ 625ಕ್ಕೆ 608 ಅಂಕಗಳನ್ನು ಪಡೆದು ಶೇಕಡ 97.28ರಷ್ಟು ಫಲಿತಾಂಶ ಮಾಡಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಪೂಜಾ ನಾಯ್ಕೋಡಿ 606 ಅಂಕ (ಶೇ.97) ಪಡೆದು ದ್ವಿತೀಯ ಸ್ಥಾನ. ಭಾಗ್ಯಲಕ್ಷ್ಮಿ ಬಂಡಗಾರ 602 ಅಂಕ (ಶೇ.96.32) ಪಡೆದು ತೃತೀಯ ಸ್ಥಾನ. ವೇದಾಂತಿ ಹಿಕ್ಕನಗುತ್ತಿ 600 ಅಂಕ (ಶೇ.96) ಗಳಿಸಿ ಶ್ಲಾಘನೀಯ ಸಾಧನೆ ಮಾಡಿದ್ದಾರೆ.
ವಿಷಯವಾರು ನೂರಕ್ಕೆ ನೂರು ಅಂಕಗಳು: ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿನಿಯರು ಗರಿಷ್ಠ ಅಂಕಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ: ಹಿಂದಿ ಪರೀಕ್ಷೆಯಲ್ಲಿ ಒಟ್ಟು 10 ವಿದ್ಯಾರ್ಥಿನಿಯರು 100ಕ್ಕೆ 100 ಅಂಕ, ಕನ್ನಡ ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು 100ಕ್ಕೆ 100 ಅಂಕ, ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು 100ಕ್ಕೆ 100 ಅಂಕ ಪಡೆದಿದ್ದಾರೆ.
ವಿದ್ಯಾರ್ಥಿನಿಯರ ಈ ಅಮೋಘ ಸಾಧನೆಗೆ ಶಾಲೆಯ ಪ್ರಾಂಶುಪಾಲರಾದ ಪ್ರಭಾಕರ ಪಾಟೀಲ, ಹಿಂದಿ ಶಿಕ್ಷಕ ಬಸವರಾಜ ಭೂತಿ, ಕನ್ನಡ ಶಿಕ್ಷಕ ಧರೆಪ್ಪ ಬಿರಾದಾರ, ಗಣಿತ ಶಿಕ್ಷಕಿ ಎಸ್.ಎ.ಶೇಖ, ವಿಜ್ಞಾನ ಶಿಕ್ಷಕ ಎಂ.ಎ.ಫಿರ್ಜಾದೆ, ಸಮಾಜ ವಿಜ್ಞಾನ ಶಿಕ್ಷಕಿ ರೂಪಾದೇವಿ, ಆಂಗ್ಲ ಭಾಷೆ ಶಿಕ್ಷಕಿ ಸವಿತಾ ಆಸಂಗಿಹಾಳ, ದೈಹಿಕ ಶಿಕ್ಷಕ ಈಶ್ವರಪ್ಪ ಬಿರಾದಾರ, ಗಣಕಯಂತ್ರ ಶಿಕ್ಷಕ ಶ್ರೀನಾಥ ನಾಯ್ಕೋಡಿ, ಶುಶ್ರೂಷಾಧಿಕಾರಿ ಸುನಿತಾ ಗೇರ್ಡೇ, ಚಿತ್ರಕಲಾ ಶಿಕ್ಷಕಿ ಜ್ಯೋತಿ ದುರ್ಗಾ, ಸಂಗೀತ ಶಿಕ್ಷಕ ರೇಣುಕಾಚಾರ್ಯ, ನಿಲಯ ಪಾಲಕಿ ಮಾಲತಿ ತಡಲಗಿ ಹಾಗೂ ಪ್ರಥಮ ದರ್ಜೆ ಸಹಾಯಕಿ ಗಂಗುಬಾಯಿ ಲಾವಟೆ ಸೇರಿದಂತೆ ಶಾಲೆಯ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.




