Ad imageAd image

ನನ್ನನ್ನು ಸೇರಿ 7 ಎಎಪಿ ಸಂಸದರು ಬಿಜೆಪಿ ಸೇರ್ಪಡೆ: ರಾಘವ್ ಛಡ್ಡಾ

Nagesh Talawar
ನನ್ನನ್ನು ಸೇರಿ 7 ಎಎಪಿ ಸಂಸದರು ಬಿಜೆಪಿ ಸೇರ್ಪಡೆ: ರಾಘವ್ ಛಡ್ಡಾ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಆಪ್ ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಸೇರಿದಂತೆ 7 ಸಂಸದರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ರಾಘವ್ ಛಡ್ಡಾ, ಆಪ್ ನ 10 ರಾಜ್ಯಸಭಾ ಸದಸ್ಯರಲ್ಲಿ 7 ಸದಸ್ಯರು ಬಿಜೆಪಿ ಸೇರಿದ್ದೇವೆ. ಈ ಕುರಿತು ಸಭಾಪತಿ ಸಿ.ಪಿ ರಾಧಾಕೃಷ್ಣನ್ ಅವರಿಗೆ ಪತ್ರ ಸಲ್ಲಿಸಿದ್ದೇವೆ. ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಲ್ಲಿಸುತ್ತಿದ್ದೇವೆ ಎಂದರು.

ಸ್ವಾತಿ ಮಾಲಿವಾಲ್, ವಿಕ್ರಮ್ ಸಾಹ್ನಿ, ಹರಭಜನ್ ಸಿಂಗ್, ಅಶೋಕ್ ಮಿತ್ತಲ್, ರಾಜೇಂದ್ರ ಗುಪ್ತಾ, ಸಂದೀಪ್ ಪಾಠಕ್ ಸೇರಿ 7 ಸಂಸದರು ಬಿಜೆಪಿ ಸೇರಿರುವುದಾಗಿ ತಿಳಿಸಿದ್ದಾರೆ. ರಾಜ್ಯಸಭಾ ಉಪ ನಾಯಕ ಸ್ಥಾನದಿಂದ ರಾಘವ್ ಛಡ್ಡಾ ಅವರನ್ನು ಇತ್ತೀಚೆಗಷ್ಟೇ ಆಪ್ ಕೆಳಗೆ ಇಳಿಸಿತ್ತು. ಇದೀಗ ಇಷ್ಟೊಂದು ರಾಜಕೀಯ ಬೆಳವಣಿಗೆಗಳು ನಡೆದಿವೆ.

WhatsApp Group Join Now
Telegram Group Join Now
Share This Article