ಪ್ರಜಾಸ್ತ್ರ ಸುದ್ದಿ
ಮಾಲೂರು(Maloru): ಸಚಿವ ಡಿ.ಸುಧಾಕರ ಅನಾರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಕೆಲ ದುರ್ಬುದ್ದಿ ಜನರಿರುತ್ತಾರೆ. ಅಂತಹ ಜನರಿಂದ ಹೆಬ್ಬಟ್ಟಿನ ಘಟನೆ ನಡೆಯುತ್ತವೆ. ಸುಧಾಕರ ಆರೋಗ್ಯದ ವಾಸ್ತವಾಂಶವನ್ನು ಸರ್ಕಾರ ಜನರ ಮುಂದೆ ಇಡಬೇಕು ಎಂದು ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಮಾತನಾಡಿದ ಅವರು, ಕೆಲವು ಜನರಿಂದ ಹೆಬ್ಬಟ್ಟಿನ ಘಟನೆಗಳು ನಡೆಯುತ್ತವೆ. ದುರ್ಬಳಕೆ ಆಗುವ ಸಾಧ್ಯತೆ ಹಿನ್ನಲೆ ಸ್ವಲ್ಪ ಎಚ್ಚರಿಕೆಯಿಂದರಬೇಕು ಎಂದು ಹೇಳಿದ್ದೆ. ಇದು ಸುಧಾಕರ ವಿಚಾರದಲ್ಲಿ ಹೇಳಿದ್ದಲ್ಲ. ನನ್ನ ಮಾತಿನಲ್ಲಿ ಯಾವ ಮಾರ್ಮಿಕವೂ ಇಲ್ಲ. ಮುಖ್ಯಮಂತ್ರಿಯಾಗಬೇಕು ಎಂದು ಪದೆಪದೆ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. 40-50 ಶಾಸಕರು ವಿಮಾನದ ಟಿಕೆಟ್ ಬುಕ್ಕಿಂಗ್ ನಡೆಯುತ್ತಿದೆ ಅಂತಾ ಹೇಳಿದರು.




