ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಜೀವನಾಧರಿತ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಹಲವಾರು ಕಾರಣಕ್ಕೆ ಸಾಕಷ್ಟು ಸದ್ದು ಮಾಡಿದೆ. ಇದರಲ್ಲಿನ ಹಲವಾರು ವಿಚಾರಗಳು ಕುರಿತು ಮಂಗಳವಾರ ಸೋನಿಯಾ ಗಾಂಧಿ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಕುರಿತಾಗಿ ಏನು ಬರೆದಿದ್ದಾರೆ ಅನ್ನೋ ಕುತೂಹಲ ಸಾಕಷ್ಟು ಜನರಲ್ಲಿದೆ.
ಪ್ರಧಾನಿ ಮೋದಿಯವರ ಜೊತೆಗೆ ಯಾವುದೇ ನೇರ ಒಡನಾಟ ಇರಲಿಲ್ಲ. ಮುಖಾಮುಖಿಯಾದಗಲೆಲ್ಲ ಅವರು ನೇರವಾಗಿ ನೋಡಲು ಆಗದೆ ಬೇರೆ ಕಡೆ ನೋಡಲು ಯತ್ನಿಸುತ್ತಾರೆ. ಸಂಸತ್ ಅಧಿವೇಶನದ ಮುಕ್ತಾಯದ ಬಳಿಕ ಅಥವ ಪ್ರಮುಖ ಪಕ್ಷಗಳ ನಾಯಕರು ಸ್ಪೀಕರ್ ರೂಮಿನಲ್ಲಿನ ಅಧಿಕೃತ ಸಭೆಗಳಲ್ಲಿ ಭೇಟಿಯಾಗುತ್ತೇವೆ. ಅಲ್ಲಿಯೂ ನಮಸ್ಕಾರ, ಶುಭಾಶಯ ಅಷ್ಟೇ. ಪಕ್ಷಾತೀತವಾಗಿ ನಾಯಕರು ಸೌಹಾರ್ದಯುತವಾಗಿ ಇರುತ್ತಿದ್ದ ಹಿಂದಿನ ದಿನಗಳಿಗಿಂತ ಈಗ ವಿಭಿನ್ನವಾಗಿದೆ ಎಂದಿದ್ದಾರೆ.
ಹುಟ್ಟುಹಬ್ಬ, ಹೊಸ ವರ್ಷದ ಶುಭಾಶಯ ಸೇರಿ ಸಣ್ಣಪುಟ್ಟ ಮಾತುಗಳು ಹೊರತು ಪಡಿಸಿ ನಾವು ಸರಿಯಾಗಿ ಯಾವತ್ತೂ ಮಾತನಾಡಿಲ್ಲ. ಅವರು ಅವರ ಕಲ್ಪನೆಯ ಭಾರತಕ್ಕಾಗಿ ಹೋರಾಡುತ್ತಿದ್ದಾರೆ. ನಾನು ಸರ್ವಾಧಿಕಾರದ ವಿರುದ್ಧದ ಭಾರತ, ಎಲ್ಲರನ್ನೂ ಒಳಗೊಳ್ಳುವ, ಜಾತ್ಯಾತೀತ, ಸಾಮಾಜಿಕ ನ್ಯಾಯದ ಪರವಾಗಿರುವ ಭಾರತಕ್ಕಾಗಿ ನಾನು ಹೋರಾಡುತ್ತಿದ್ದೇನೆ ಅಂತಾ ಹೇಳಿದ್ದಾರೆ. ಹೀಗೆ ಹಲವಾರು ವಿಷಯಗಳ ಕುರಿತು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.


