LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಂಜಾಬಿಗೆ ಹಾರ್ದಿಕ್.. ಮುಂಬೈಗೆ ಅರ್ಷದೀಪ್

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಐಪಿಎಲ್ ಟಿ-20 2027ರ ಆವೃತ್ತಿಯ ಇನ್ನೇನು ಶುರುವಾಗಲಿದೆ. ಇದಕ್ಕೂ ಮೊದಲು ನಡೆದಿರುವ ಹೈ ಪ್ರೊಫೈಲ್ ಟ್ರೇಂಡಿಂಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹಾರ್ದಿಕ್ ಪಾಂಡ್ಯೆ ಪಂಜಾಬ್ ಪಾಲಾಗಿದ್ದಾರೆ. ಪಂಜಾಬಿನ ಅರ್ಷದೀಪ್ ಸಿಂಗ್ ಮುಂಬೈ ತಂಡ ಸೇರಿದ್ದಾರೆ.

ಆಲ್ ರೌಂಡರ್ ಹಾರ್ದಿಕ್ 18 ಕೋಟಿ ರೂಪಾಯಿಗೆ ಪಂಜಾಬ್ ಟೀಂಗೆ ಸೇರ್ಪಡೆಯಾಗಿದ್ದಾರೆ. ಇಷ್ಟೇ ಮೊತ್ತಕ್ಕೆ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮುಂಬೈ ತಂಡ ಸೇರಿದ್ದಾರೆ. ಈ ಮೂಲಕ ಇಬ್ಬರು ಪ್ರಮುಖ ಆಟಗಾರರು ಅದಲು ಬದಲು ಆಗಿದ್ದಾರೆ. ಐಪಿಎಲ್ ನಲ್ಲಿ ಇದುವರೆಗೂ 162 ಪಂದ್ಯಗಳನ್ನು ಆಡಿರುವ ಪಾಂಡ್ಯ 2,955 ರನ್ ಗಳಿಸಿದ್ದಾರೆ. 82 ವಿಕೆಟ್ ಪಡೆದಿದ್ದಾರೆ.

ಪಂಜಾಬ್ ಪರ 96 ಪಂದ್ಯಗಳನ್ನು ಆಡಿರುವ ಅರ್ಷದೀಪ್ ಸಿಂಗ್ 111 ವಿಕೆಟ್ ಕಬಳಿಸಿದ್ದಾರೆ. ಇದರೊಂದಿಗೆ ಪಂಜಾಬ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಐಪಿಎಲ್ ಕದನ ಶುರುವಾಗಲಿದ್ದು, ಕ್ರಿಕೆಟ್ ಪ್ರೇಮಿಗಳು ಫುಲ್ ಬ್ಯುಸಿಯಾಗಲಿದ್ದಾರೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST