LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಕಿ ಅನಾಹುತ, ಮಕ್ಕಳಿಬ್ಬರು ಸೇರಿ 7 ಜನರ ಸಾವು

ಪ್ರಜಾಸ್ತ್ರ ಸುದ್ದಿ

ಮುಂಬೈ(Mumbai): ಇಲ್ಲಿನ ಚಂಬೂರ್(Chembur) ನಲ್ಲಿರುವ ಅಂಗಡಿ ಹಾಗೂ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ದೊಡ್ಡ ದುರಂತ ನಡೆದಿದೆ. 7 ಜನರು ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಭಾನುವಾರ ಮುಂಜಾನೆ ಬೆಂಕಿ ಅನಾಹುತ ಸಂಭವಿಸಿದೆ. ಬಾಲಕಿ, ಬಾಲಕ ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ ಅಂತಾ ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇವರೆಲ್ಲ ಒಂದೇ ಕುಟುಂಬದವರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅನಿತಾ ಗುಪ್ತಾ(39), ಪ್ರೇಮ್ ಗುಪ್ತಾ(30), ಮಂಜು ಪ್ರೇಮ್ ಗುಪ್ತಾ(30) ನರೇಂದ್ರ ಗುಪ್ತಾ(10), ಪ್ಯಾರಿಸ್ ಗುಪ್ತಾ(07) ಮೃತರು ಎಂದು ಗುರಿತಸಲಾಗಿದೆ. ಇನ್ನಿಬ್ಬರ ಕುರಿತು ಮಾಹಿತಿ ತಿಳಿದು ಬರಬೇಕಿದೆ. ಚೆಂಬೂರ್ ಪ್ರದೇಶದ ಸಿದ್ಧಾರ್ಥ ಕಾಲೋನಿಯಲ್ಲಿ ನಸುಕಿನಜಾವ 5.20ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ನೆಲ ಮಹಡಿಯನ್ನು ಅಂಗಡಿಯಾಗಿ(Shop), ಮೇಲಿನ ಮಹಡಿಯನ್ನು ವಸತಿಯಾಗಿ ಪರಿವರ್ತಿಸಲಾಗಿತ್ತು. ಅಂಗಡಿಯಲ್ಲಿನ ವಿದ್ಯುತ್ ವೈರಿಂಗ್ ನಲ್ಲಿ ಸಮಸ್ಯೆ ಕಾಣಿಸಿಕೊಂಡು ಬೆಂಕಿ(Fire Broke) ಹೊತ್ತಿಕೊಂಡಿದೆ. ಅದು ಮೇಲಿನ ಮಹಡಿಗೂ ವ್ಯಾಪಿಸಿದೆ. ಈ ವೇಳೆ 7 ಜನರು ತೀವ್ರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST