ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 11 ಅಪರಾಧಿಗಳಲ್ಲಿ ಇಬ್ಬರ ಶಿಕ್ಷೆ ಸುಪ್ರೀಂ ಕೋರ್ಟ್ ಅಮಾನತುಗೊಳಿಸಲಾಗಿದೆ. ಅಲ್ಲದೆ ಜಾಮೀನು ಮಂಜೂರು ಸಹ ಮಾಡಲಾಗಿದೆ. ಇಬ್ಬರಲ್ಲಿ ಒಬ್ಬರು ತೀವ್ರ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಅಲ್ಲದೆ ಒಬ್ಬರು ಹೆಸರನ್ನು ಗಲಭೆ ನಡೆದು 3 ವರ್ಷಗಳ ಬಳಿಕ ಹೆಸರು ಉಲ್ಲೇಖಿಸಲಾಗಿದೆ.
ಇಬ್ಬರೂ 17 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ ಅನುಭವಿಸಿದ್ದಾರೆ ಎಂದು ಅಪರಾಧಿಗಳ ಪರ ವಾದ ಮಂಡಿಸಿದ ಸಿದ್ಧಾರ್ಥ ಲೂತ್ರಾ ಈ ಬಗ್ಗೆ ತಿಳಿಸಿದರು. ಇದಕ್ಕೆ ಸಾಲಿಟರ್ ಜನಲರ್ ರಾಜಾ ಠಾಕ್ರೆ ವಿರೋಧ ವ್ಯಕ್ತಪಡಿಸಿದರು. ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ ಹಾಗೂ ಪಿ.ಬಿ.ವರಾಳೆ ಅವರಿದ್ದ ಪೀಠ ಅಪರಾಧಿಗಳಾದ ಬಿಪಿನ್ ಚಂದ್ರ ಜೋಶಿ ಹಾಗೂ ಪ್ರದೀಪ ಮೊರ್ಡಿಯಾಗೆ ಜಾಮೀನು ಮಂಜೂರು ಮಾಡಿದೆ.


