LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ

ಪ್ರಜಾಸ್ತ್ರ ಸುದ್ದಿ

ಕುಣಿಗಲ್(Kunigal): ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ(Murder) ಅಂತ್ಯವಾದ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಕೆಆರ್ ಎಸ್ ಅಗ್ರಹಾರದಲ್ಲಿ ಈ ಘಟನೆ ನಡೆದಿದೆ. ಕೊತ್ತಗೆರೆ ಹೋಬಳಿಯ ಬಾಗೇನಹಳ್ಳಿ ನಿವಾಸಿ ರವಿ(40) ಕೊಲೆಯಾದ ವ್ಯಕ್ತಿ. ಮಳವಳ್ಳಿಯ ಶಿವಕುಮಾರ್ ಕೊಲೆ ಮಾಡಿದ ಆರೋಪಿ. ಇವರಿಬ್ಬರು ಒಂದೇ ಕಡೆ ಗಾರೆ ಕೆಲಸ ಮಾಡುತ್ತಿದ್ದರು. ಕೊಲೆ ಆರೋಪಿ ಶಿವಕುಮಾರ್ ಪರಾರಿಯಾಗಿದ್ದಾನೆ.

ರವಿ ಹಾಗೂ ಆತನ ಪತ್ನಿ ಭಾನುವಾರ ಕೆಲಸಕ್ಕೆ ಬಂದಿದ್ದಾರೆ. ಪತ್ನಿ ಭಾಗ್ಯ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಹೋಗಿದ್ದಾರೆ. ಆದರೆ, ರವಿ ಮನೆಗೆ ಹೋಗದೆ ಶಿವಕುಮಾರನ ಶೆಡ್ಡಿಗೆ(Shed) ಹೋಗಿದ್ದಾನೆ. ರಾತ್ರಿ ಇವರಿಬ್ಬರ ನಡುವೆ ಯಾವ ವಿಚಾರಕ್ಕೆ ಗಲಾಟೆ ನಡೆದಿದೆ ಗೊತ್ತಿಲ್ಲ. ಹಾಲೋಬ್ಲಾಕ್ ಇಟ್ಟಿಗೆಯಿಂದ ರವಿಗೆ ಹೊಡೆದು ಕೊಲೆ ಮಾಡಲಾಗಿದೆ. ರಂಗಸ್ವಾಮಿ ಎಂಬುವರು ಇಂದು ಮುಂಜಾನೆ ಗಾರೆ ಸಾಮಾಗ್ರಿಗಳನ್ನು ಪಡೆಯಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ತನಿಖೆ ನಡೆಯುತ್ತಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST