ಪ್ರಜಾಸ್ತ್ರ ಸುದ್ದಿ
ಜೋರ್ಹತ್(Jorhat): ಅಸ್ಸಾಂ ರಾಜ್ಯದ ಜೋರ್ಹತ್ ಜಿಲ್ಲೆಯ ರೌರಿಯಾ ಪ್ರದೇಶದಲ್ಲಿರುವ ಐಎಎಫ್ ವಾಯುನೆಲೆಯಲ್ಲಿ ಲ್ಯಾಂಡಿಂಗ್ ಆಗುವ ವೇಳೆ ವಾಯುಪಡೆಯ ಎಎನ್-32 ಹೆಸರಿನ ವಿಮಾನ ಪತನಗೊಂಡಿದೆ. ಈ ಬಗ್ಗೆ ರಕ್ಷಣಾ ವಕ್ತಾರರು ಶನಿವಾರ ಮಾಹಿತಿ ನೀಡಿದ್ದಾರೆ.
ವಿಮಾನದಲ್ಲಿದ್ದ ಸಿಬ್ಬಂದಿಯ ಸ್ಥಿತಿ ಹಾಗೂ ಘಟನೆ ಕಾರಣ ಏನು ಅನ್ನೋದು ತಿಳಿದು ಬರಬೇಕಿದೆ. ಬೆಂಕಿ ನಂದಿಸುವ ಕಾರ್ಯಕ್ಕೆ ತುರ್ತು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಪೂರ್ತಿಯಾಗಿ ಪರಿಶೀಲನೆ ನಡೆಸಿದ ಬಳಿಕ ಘಟನೆಗೆ ಏನು ಕಾರಣ ಅನ್ನೋದು ತಿಳಿದು ಬರಬಲಿದೆ.



