ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಮಹಾರಾಷ್ಟ್ರದ ಮುಂಬಯಿ ನಗರದಲ್ಲಿ ನಡೆದ ಬುದ್ಧ ಧಮ್ಮದ ಅರಿವು, ಬುದ್ಧರ ವಿಚಾರಗಳ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಪಾದಯಾತ್ರೆ ನಡೆಸಲಾಯಿತು. ಇದರಲ್ಲಿ ಭೀಮರಾಜ್ಯ ಸೇನೆಯ ಕರ್ನಾಟಕ ರಾಜ್ಯಾಧ್ಯಕ್ಷ ಎನ್.ಶಿವು ಸೋಂಪುರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ಶ್ರೀಕಾಂತ ಬಿಜಾಪುರ ಅವರು ಭಾಗವಹಿಸಿದ್ದರು.
ಆಯುಷ್ಮಾನ್ ಬಂತೇಜಿ ಜ್ಞಾನಜ್ಯೋತಿ ಅವರ ಮುಖಂಡತ್ವದಲ್ಲಿ ಪಾದಯಾತ್ರೆ ನಡೆಸಲಾಯಿತು. ಈ ಮೂಲಕ ಇಂದಿನ ಪೀಳಿಗೆಗೆ ಬುದ್ದರ ವಿಚಾರಗಳನ್ನು ತಿಳಿಸುವ ಕೆಲಸ ಮಾಡಲಾಯಿತು. ಇದರ ಹಲವು ರಾಜ್ಯಗಳಿಂದ ಬುದ್ದ ಅನುಯಾಯಿಗಳು ಭಾಗವಹಿಸಿದ್ದರು. ಅದರಂತೆ ಕರ್ನಾಟಕದಿಂದ ಭೀಮರಾಜ್ಯ ಸೇನೆಯ ಪದಾಧಿಕಾರಿಗಳು ಭಾಗವಹಿಸಿ ಹೆಜ್ಜೆ ಹಾಕಿದರು.



