LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಮನಗರ: ಟೌನ್ ಶಿಪ್ ಪರ-ವಿರುದ್ಧ ಹೋರಾಟ

ಪ್ರಜಾಸ್ತ್ರ ಸುದ್ದಿ

ರಾಮನಗರ(Ramanagara): ಬಿಡದಿ ಟೌನ್ ಶಿಪ್ ಯೋಜನೆ ಇದೀಗ ಪರ-ವಿರೋಧದ ಸ್ವರೂಪ ಪಡೆದುಕೊಂಡಿದೆ. ಒಂದು ಕಡೆ ಟೌನ್ ಶಿಪ್ ವಿರೋಧಿ ಮಹಿಳೆಯರು ವಿಷದ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡು ಹೋರಾಟ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಪರವಾಗಿ ಹೋರಾಟ ಮಾಡಲಾಗುತ್ತಿದೆ. ಸೋಮವಾರ ಸರ್ವೇಗೆ ಬಂದಿದ್ದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ಮಂಗಳವಾರ ಎರಡು ಕಡೆಯಿಂದ ಹೋರಾಟ ನಡೆದಿದೆ.

ಈಗಾಗ್ಲೇ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಮಹಿಳೆಯರು ಜಂಟಿ ಅಳೆತ ಪ್ರಮಾಣೀಕರಣ ವಿರೋಧಿಸಿ ವಿಷದ ಬಾಟಲಿಯನ್ನು ಪ್ರದರ್ಶನ ಮಾಡಿದ್ದಾರೆ. ಇದರ ಸಮೀಪದಲ್ಲಿ ಯೋಜನೆ ಪರವಾಗಿ ಹೋರಾಟ ಮಾಡಲಾಗುತ್ತಿದೆ. ಇವರ ಇದಕ್ಕಾಗಿ ರಸ್ತೆ ತಡೆ ನಡೆಸಿದರು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಮನವೊಲಿಸಲು ನೋಡಿದರೂ ಕೇಳಿಲ್ಲ. ಎಸ್ಪಿ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.

Advertisement

Author
Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST