ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ಪ್ರಕರಣ ಸೇರಿದಂತೆ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚೂಕ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕಳೆದ 18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸಿದ್ದು, ಆರೋಗ್ಯದಲ್ಲಿ ಏರುಪೇರಾಗಿದೆ.
ಈ ಬಗ್ಗೆ ಮಾತನಾಡಿರುವ ಸೋನಮ್, ನನ್ನನ್ನು ಉಪವಾಸ ಸತ್ಯಾಗ್ರಹದಿಂದ ಕೈಬಿಡಿ ಎನ್ನುವ ಬದಲು ಜುಲೈ 20ರಂದು ನಡೆಯುವ ಸಂಸತ್ ಭವನ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿ ಎಂದಿದ್ದಾರೆ. ಉಪವಾಸ ಬಿಡಲು ಸಾವಿರಾರು ಜನರು ಸಂದೇಶ ಕಳಿಸಿದ್ದಾರೆ. ಕೆಲ ಹಿರಿಯ ರಾಜಕಾರಣಿಗಳು ಬಂದು ಪ್ರೀತಿಯಿಂದ ಮಾತನಾಡಿಸಿದ್ದಾರೆ. ನಾನು ಉಪವಾಸ ಸತ್ಯಾಗ್ರಹ ಕೈಬಿಟ್ಟರೆ ಈ ಸಂದೇಶ ಹೋಗುತ್ತದೆ. ಹೋರಾಟ ಮಾಡುವವರು ಬರುತ್ತಾರೆ. ಹೋಗುತ್ತಾರೆ. ನಾವು ಉತ್ತರಿಸುವ ಅಗತ್ಯವಿಲ್ಲವೆಂದು ಸರ್ಕಾರ ಅಂದುಕೊಳ್ಳುತ್ತೆ ಎಂದಿದ್ದಾರೆ.



