ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪದೆಪದೆ ಇಂಧನ ಬೆಲೆ ಏರಿಕೆ ಆಗುತ್ತಿರುವುದರಿಂದ ಸಾರ್ವಜಿಕರು ಕಂಗಾಲಾಗಿದ್ದಾರೆ. ಪ್ರತಿಯೊಂದರ ಬೆಲೆಯೂ ಏರಿಕೆಯಾಗುತ್ತಿದೆ. ಈಗ ಸಿಎನ್ ಜಿ ಬೆಲೆಯು ಏರಿಕೆ ಮಾಡಲಾಗಿದೆ. ಪ್ರತಿ ಕೆಜಿಗೆ 1 ರೂಪಾಯಿ ಏರಿಕೆ ಮಾಡಲಾಗಿದೆ. ಎರಡೇ ವಾರದಲ್ಲೇ ಮೂರು ಬಾರಿ ಬೆಲೆ ಏರಿಕೆಯಾಗಿದೆ. ಶನಿವಾರದಿಂದಲೇ ಇದು ಜಾರಿಗೆ ಬರುತ್ತಿದೆ.
ಕಳೆದ ಎರಡು ವಾರದಲ್ಲಿಯೇ ಮೂರನೇ ಬಾರಿಗೆ ಸಿಎನ್ ಜಿ ಬೆಲೆ ಏರಿಕೆಯಾಗಿದೆ. ಕಳೆದ ವಾರ ಕೆಜಿಗೆ 3 ರೂಪಾಯಿ ಏರಿಕೆ ಮಾಡಲಾಗಿತ್ತು. ದೆಹಲಿಯಲ್ಲಿ ಸಿಎನ್ ಜಿ ಒಂದು ಕೆಜಿಗೆ 81.09 ರೂಪಾಯಿ ಇದೆ. ಇನ್ನು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ. ಲೀಟರ್ ಪೆಟ್ರೋಲ್ ಮೇಲೆ 87 ಪೈಸೆ, ಡೀಸೆಲ್ ಮೇಲೆ 91 ಪೈಸೆ ಏರಿಕೆಯಾಗಿದೆ. ಹತ್ತೇ ದಿನದಲ್ಲಿ ಮೂರು ಬಾರಿಗೆ ಬೆಲೆ ಏರಿಕೆ ಮಾಡಲಾಗಿದೆ.



