LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘ಜಯಾ ಅಮಿತಾಬ್ ಬಚ್ಚನ್ ಎನ್ನಬೇಡಿ’

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಬಾಲಿವುಡ್ ಹಿರಿಯ ನಟಿ, ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್(jaya bachchan) ಸೋಮವಾರ ಸಂಸತ್ತಿನಲ್ಲಿ ಮಾತನಾಡಲು ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ಹೇಳಿದರು. ಆಗ ಅವರು ಜಯಾ ಅಮಿತಾಬ್ ಬಚ್ಚನ್ ಎಂದು ಕರೆದು ಮಾತನಾಡಲು ಸೂಚಿಸಿದರು. ಇದಕ್ಕೆ ಆಕ್ಷೇಪ ತೆಗೆದ ಅವರು, ನನ್ನನ್ನು ಜಯಾ ಬಚ್ಚನ್ ಎಂದು ಕರೆದರೆ ಸಾಕು. ಜಯಾ ಅಮಿತಾಬ್ ಬಚ್ಚನ್ ಎನ್ನಬೇಡಿ ಎಂದಿದ್ದಾರೆ. ಅದು ಅನೇಕರಿಗೆ ಖುಷಿ ನೀಡಿದೆ. ಕೆಲವರಿಗೆ ಅಚ್ಚರಿ ಎನಿಸಿದೆ.

ಹೆಣ್ಮಕ್ಕಳು ಗಂಡನ ಹೆಸರಿನಿಂದ ಗುರುತಿಸಲ್ಪಡಬೇಕು ಎನ್ನುವ ವಿಧಾನಗಳಿವೆ. ಅವರಿಗೆ ಯಾವುದೇ ಗುರುತಿಲ್ಲ. ಅವರು ಯಾವುದೇ ಸಾಧನೆ ಮಾಡುವುದಿಲ್ಲ. ಆದರೆ, ಇದೀಗ ಹೊಸ ಗಾಳಿ ಬೀಸುತ್ತಿದೆ. ನಮ್ಮ ಹೆಸರುಗಳಿಂದ ನಾವು ಗುರುತಿಸಲ್ಪಡಬೇಕು ಎನ್ನುವುದು ನೆನಪಿಸಬೇಕಿದೆ ಎಂದಿದ್ದಾರೆ. ಇದಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹಿರಿಯ ನಟ ಅಮಿತಾಬ್ ಬಚ್ಚನ್(amitabh bachchan)ರೊಂದಿಗೆ ಮದುವೆಯಾಗುವ ಪೂರ್ವದಲ್ಲಿಯೇ ನಟಿಯಾಗಿ ಗುರುತಿಸಿಕೊಂಡಿದ್ದರು. ಖ್ಯಾತಿ ಗಳಿಸಿದ್ದರು. ಜಯಾ ಬಚ್ಚನ್ ಅಂದರೆ ಸಾಕು ಎನ್ನುವ ಮಾತು ಸರಿಯಾಗಿದೆ ಎಂದಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST