LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೇಂದ್ರದ ಬಜೆಟ್: ಈ ಕ್ಷಣದ ಪ್ರಮುಖ ಅಂಶಗಳು ಇಲ್ಲಿವೆ..

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಕೇಂದ್ರ ಸರ್ಕಾರದ(Union Budget )2025-26ನೇ ಸಾಲಿನ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಮಂಡಿಸುತ್ತಿದ್ದಾರೆ. ಸತತವಾಗಿ 8 ಬಾರಿ ಬಜೆಟ್ ಮಂಡಿಸಿದ ದಾಖಲೆಗೆ ಪಾತ್ರರಾದರು. ಇದಕ್ಕೂ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಂಪ್ರದಾಯಿಕವಾಗಿ ಮೊಸರು ಹಾಗೂ ಸಕ್ಕರೆ ತಿನಿಸಿ ಶುಭ ಕೋರಿದರು. ಬಜೆಟ್ ಮಂಡನೆ ಶುರುವಾಗುತ್ತಿದಂತೆ ವಿಪಕ್ಷಗಳ ವಿರೋಧ ಶುರುವಾಯಿತು. ಬಜೆಟ್ ಮಂಡನೆ ಬಳಿಕ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.

ಕೃಷಿ ಕೈಗಾರಿಕೆ, ಆರ್ಥಿಕತೆ, ಇಂಧನ, ಗಣಿಗಾರಿಕೆ ಸೇರಿ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಐದು ವರ್ಷಗಳ ಅಭಿವೃದ್ಧಿ ದೃಷ್ಟಿಯಿಂದ, ಯುವ ಜನತೆ, ಮಹಿಳೆಯರು, ರೈತರು ಪರವಾದ ಬಜೆಟ್ ಮಂಡಿಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಆತ್ಮನಿರ್ಭರ ಭಾರತ ಮೂಲಕ ನೀಡುವ ಸ್ಟಾರ್ಟ್ ಅಪ್ ಗಳಿಗೆ 10 ಕೋಟಿಯಿಂದ 20 ಕೋಟಿಯವರೆಗೆ ಕಡಿಮೆ ಬಡ್ಡಿ ಸಾಲ. ಮೈಕ್ರೋ ಕಂಪನಿಗಳಿಗೆ 5 ಲಕ್ಷವರೆಗಿನ ಕ್ರೆಡಿಟ್ ಕಾರ್ಡ್ ವಿತರಣೆ.

ಉದ್ಯಮದಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಮಹಿಳೆಯರಿಗೆ ಉತ್ತೇಜನ ನೀಡಲು ಹೊಸ ಯೋಜನೆ ತರಲಾಗುವುದು. ಇದರೊಂದಿಗೆ ಮೇಕ್ ಇನ್ ಇಂಡಿಯಾ ಬ್ರ್ಯಾಂಡ್ ಬೆಂಬಲಿಸಲಾಗುವುದು. ಎಐ ಕ್ಷೇತ್ರಕ್ಕೆ ಮೂರು ಹೊಸ ಸಂಸ್ಥೆಗಳ ಸ್ಥಾಪನೆ. ವೈದ್ಯಕೀಯ ಕಾಲೇಜುಗಳ ಸೀಟುಗಳನ್ನು 10 ವರ್ಷಗಳಲ್ಲಿ ಶೇಕಡ 100ರಷ್ಟು ಹೆಚ್ಚಳ ಮಾಡಲಾಗುವುದು. ಪಟ್ನಾ ಐಐಟಿ ವಿಸ್ತರಣೆ. 60 ಸಾವಿರ ಕೋಟಿ ರಫ್ತು ವಹಿವಾಟು ಹೊಂದಿರುವ ಮೀನುಗಾರಿಕೆಯಲ್ಲಿ ಅಂಡಮಾನ್ ನಿಕೋಬಾರ್ ಹಾಗೂ ಲಕ್ಷದ್ವೀಪಗಳನ್ನು ಗಮನದಲ್ಲಿಟ್ಟುಕೊಂಡು ಒತ್ತು ನೀಡಲಾಗುವುದು.

ವಿಕಸಿತ ಭಾರತದ ಮೂಲಕ ಬಡತನ ಮುಕ್ತ ಭಾರತ ಮಾಡಲಾಗುವುದು. ಎಲ್ಲರನ್ನು ಒಳಗೊಂಡು ಪ್ರಗತಿಯತ್ತ ಸಾಗುವುದು. ಗುಣಮಟ್ಟದ ಶಿಕ್ಷಣ ನೀಡುವುದು. ಕೈಗೆಟಕುವ ರೀತಿಯಲ್ಲಿ ಆರೋಗ್ಯ ಸೇವೆ ಖಾತ್ರಿಪಡಿಸುತ್ತೇವೆ. ವಿಶ್ವದಲ್ಲಿಯೇ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಐದು ವರ್ಷಗಳ ಯೋಜನೆಯ ದೃಷ್ಟಿಯಿಂದ ಈ ಬಜೆಟ್ ಮಂಡಿಸಲಾಗುತ್ತಿದೆ ಎಂದು ಹೇಳಿದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST