LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಹಾಲಕ್ಷ್ಮಿ ಹತ್ಯೆಯ ಆರೋಪಿ ಆತ್ಮಹತ್ಯೆ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ನಗರದ ವಯ್ಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮನೆಯೊಂದರಲ್ಲಿ ಮಹಾಲಕ್ಷ್ಮಿ(Mahalakshmi) ಎನ್ನುವ ಯುವತಿಯನ್ನು ಹತ್ಯೆ(Murder) ಮಾಡಿದ ಪ್ರಕರಣದ ಆರೋಪಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಡಿಶಾ ಮೂಲದ ರಂಜನ್ ಪ್ರತಾಪ್ ರಾಯ್ ಎಂಬಾತ ಸ್ವಗ್ರಾಮದಲ್ಲಿರುವ ಮನೆಯ ಹತ್ತಿರದ ಸ್ಮಶಾನದಲ್ಲಿ ನೇಣಿಗೆ ಶರಣಾಗಿರುವುದು(Suicide) ತಿಳಿದು ಬಂದಿದೆ. ಸೆಪ್ಟೆಂಬರ್ 3ರಂದು ಯುವತಿಯ ಹತ್ಯೆ ನಡೆದಿದ್ದು, ಘಟನೆ ನಡೆದು ಸುಮಾರು 15 ರಿಂದ 19 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಆರೋಪಿ ರಂಜನ್ ಪ್ರತಾಪ್ ರಾಯ್ ಡೆತ್ ನೋಟ್ ಬರೆದಿದ್ದಾನೆ. ಅದರಲ್ಲಿ ಮಹಾಲಕ್ಷ್ಮಿಯನ್ನು ತಾನೇ ಹತ್ಯೆ ಮಾಡಿರುವುದಾಗಿ ಹೇಳಿದ್ದಾನೆ. ಆದರೆ, ಯುವತಿಯನ್ನು ಬರೀ ಹತ್ಯೆ ಮಾಡಿ ಬಿಟ್ಟಿರಲಿಲ್ಲ. ಬರೋಬ್ಬರಿ 59 ತುಂಡುಗಳನ್ನಾಗಿ ಮಾಡಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಪರಾರಿಯಾಗಿದ್ದ. ಆದ್ದರಿಂದ ಇದರ ಹಿಂದೆ ಇನ್ನು ಕೆಲವರು ಕೈವಾಡ ಇರುವ ಶಂಕೆಯಿದೆ. ಈಗ ಈತ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಪೊಲೀಸರ ತನಿಖೆಗೆ ಮತ್ತಷ್ಟು ಸವಾಲು ಎದುರಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST