LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೈಸೂರು: ಬೆಂಕಿ ಅನಾಹುತಕ್ಕೆ ವ್ಯಕ್ತಿ ಬಲಿ

ಪ್ರಜಾಸ್ತ್ರ ಸುದ್ದಿ

ಮೈಸೂರು(Mysore): ನಗರದ ಕೆಆರ್ ರಸ್ತೆಯಲ್ಲಿರುವ ಗೋಕುಲ ಚಿತ್ರಮಂದಿರದ ಆವರಣದಲ್ಲಿ ಮಂಗಳವಾರ ಬೆಂಕಿ ಅನಾಹುತ ಸಂಭವಿಸಿದೆ. ಈ ವೇಳೆ 75 ವರ್ಷದ ವ್ಯಕ್ತಿಯೊಬ್ಬರು ಸಜೀವ ದಹನವಾಗಿದ್ದಾರೆ. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಮರಿಶೆಟ್ಟಿ ಮೃತದುರ್ದೈವಿ ಎಂದು ತಿಳಿದು ಬಂದಿದೆ.

ಗೋಕುಲ ಚಿತ್ರಮಂದಿರ ಹಲವು ವರ್ಷಗಳಿಂದ ಮುಚ್ಚಿದೆ. ಕಳೆದ 45 ವರ್ಷಗಳಿಂದ ಮರಿಶೆಟ್ಟಿ ಇಲ್ಲಿಯೇ ಕೆಲಸ ಮಾಡುತ್ತಿದ್ದರು. ಆದರೆ, ಥಿಯೇಟರ್ ಮುಚ್ಚಿದ ಬಳಿಕವೂ ಪತ್ನಿಯೊಂದಿಗೆ ಇಲ್ಲಿಯೇ ವಾಸವಾಗಿದ್ದರು. ಮಂಗಳವಾರ ಆವರಣದಲ್ಲಿನ ಕಸದ ರಾಶಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಅದು ವೇಗೆ ಹರಡಿಕೊಂಡಿದೆ. ಇದರಿಂದಾಗಿ ಮರಿಶೆಟ್ಟಿ ಹೊರಬರಲು ಆಗದೆ ಮೃತಪಟ್ಟಿದ್ದಾರೆ. ಹೊರಗೆ ಹೋಗಿದ್ದ ಪತ್ನಿ ಬಂದು ನೋಡಿದಾಗಲೇ ಪತಿ ಮೃತಪಟ್ಟಿರುವುದು ತಿಳಿದಿದೆ. ಈ ಬಗ್ಗೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST