LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಪರಿಚಿತ ವಾಹನ ಡಿಕ್ಕಿ, ಪಾದಚಾರಿ ಸಾವು

ಪ್ರಜಾಸ್ತ್ರ ಸುದ್ದಿ

ಗದಗ(Gadaga): ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ನರೇಗಲ್(Naregal) ಪಟ್ಟಣದಲ್ಲಿ ನಡೆದಿದೆ. ಮಲ್ಲಯ್ಯ ಬಕ್ಕಯ್ಯನಮಠ(68) ಮೃತ ದುರ್ದೈವಿ. ಪಟ್ಟಣ ಪಂಚಾಯ್ತಿ ಎದುರು ಈ ಒಂದು ಅಪಘಾತ(Accident) ನಡೆದಿದೆ. ವಾಹನ ಚಾಲಕ ಪರಾರಿಯಾಗಿದ್ದಾನೆ. ಅಪಘಾತದ ವೇಳೆ ಯಾರೂ ಇಲ್ಲವೆಂದು ಕಾಣಿಸುತ್ತೆ. ಹೀಗಾಗಿ ಯಾವ ವಾಹನ ಡಿಕ್ಕಿಯಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಲಾರಿ ಎಂದು ಹೇಳಲಾಗುತ್ತಿದೆ.

ವೃದ್ಧ ಮುಂಜಾನೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ದುರಂತ ನಡೆದಿದೆ. ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿಗಳ(CCTV) ಪರಿಶೀಲನೆ ಕಾರ್ಯ ನಡೆದಿದೆ. ಇದರ ಮೂಲಕ ಅಪಘಾತ ಮಾಡಿದ್ಯಾರು ಅನ್ನೋದರ ಸುಳಿವು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST