LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಲ್ವೈ ಇಲಾಖೆಯಲ್ಲಿನ ಹುದ್ದೆಗೆ ರಾಜೀನಾಮೆ ನೀಡಿದ ಫೋಗೆಟ್

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಭಾರತೀಯ ಕುಸ್ತಿಪಟುಗಳಾದ ಭಜರಂಗ್(bajrang punia) ಪೂನಿಯಾ ಹಾಗೂ ವಿನೀಶಾ ಫೋಗೆಟ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೆ ಫೋಗೆಟ್ ರೈಲ್ವೆ ಇಲಾಖೆಯಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಅವರು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ರೈಲ್ವೆ ಅಧಿಕಾರಿಗಳಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ದೇಶ ಸೇವೆ ಮಾಡಲು ಅವಕಾಶ ನೀಡಿದ ಇಲಾಖೆಯ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಇಬ್ಬರು ಕುಸ್ತಿಪಟುಗಳು ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಹರಿಯಾಣದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಿಬ್ಬರು ಸ್ಪರ್ಧೆ ಮಾಡುತ್ತಾರಾ, ಒಬ್ಬರು ಮಾಡುತ್ತಾರ, ಯಾವ ಕ್ಷೇತ್ರದಿಂದ ಮಾಡುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಇನ್ನೊಂದು ಬಿಜೆಪಿ ಇದಕ್ಕೆ ಪ್ರತಿತಂತ್ರ ಹಣಿಯುತ್ತಿದ್ದು, ವಿನೀಶಾ(vinesh phogat) ಫೋಗೆಟ್ ಸಂಬಂಧಿ ಮಹಿಳಾ ಕುಸ್ತಿಪಟು ಬಬಿತಾ ಫೋಗೆಟ್ ಅವರನ್ನು ಕಣಕ್ಕೆ ಇಳಿಸುವ ಪ್ಲಾನ್ ನಡೆಸಿದೆ ಅಂತಾನೂ ಹೇಳಲಾಗುತ್ತಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST