LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೌಡಗೆರೆಯಲ್ಲಿ ಚಾಲುಕ್ಯರ ಕಾಲದ ಹನುಮನ ಉಬ್ಬು ಶಿಲ್ಪ ಪತ್ತೆ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ವಿಜಯಪುರದ ಗೌಡಗೆರೆ ಹಳ್ಳಿಯ ಮೂಡಣಕೇರಿಯಲ್ಲಿ ಕಲ್ಯಾಣ ಚಾಲುಕ್ಯರ ನಾಲ್ಕನೇ ಸೋಮೇಶ್ವರನ ಕಾಲದಲ್ಲಿ ನಿರ್ಮಾಣವಾದ ಶಿವತೀರ್ಥ ಶ್ರೀ ಸ್ವಯಂಭು ವಿನಾಯಕ ದೇವಸ್ಥಾನದ ಮಕರ ತೋರಣದಲ್ಲಿ ಹನುಮದೇವರ ಅಪರೂಪದ ಉಬ್ಬು ಶಿಲ್ಪ ಇದ್ದು, ರಾಷ್ಟ್ರೀಯ ಸಂಶೋಧನಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಕ್ಷೇತ್ರ ಕಾರ್ಯದಲ್ಲಿ ಉಬ್ಬು ಶಿಲ್ಪವನ್ನು ಸಂಶೋಧಿಸಲಾಗಿದೆ. ಇದೇ ಮೊದಲ ಬಾರಿಗೆ ಇಂತಹ ಅಪರೂಪದ ಶಿಲ್ಪ ಪತ್ತೆಯಾಗಿದ್ದು, ಇದನ್ನು ಇತಿಹಾಸ ಸಂಶೋಧಕ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆಯ ಅಧ್ಯಕ್ಷ ಲಾಯಪ್ಪ ಇಂಗಳೆ ಅವರು ಗುರುತಿಸಿದ್ದಾರೆ.

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ದೇವಗಿರಿ ಯಾದವರ ಗೋಮಿದೇವರಸನು ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾನೆ. ಈ ಮಕರ ತೋರಣದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ದೇವರೊಂದಿಗೆ ಇರುವ ಹಣಮಂತ ದೇವರ ಉಬ್ಬು ಶಿಲ್ಪವು ಈ ಪ್ರದೇಶಲ್ಲಿ ಉಪಲಬ್ದ ಇರುವ ಅತಿ ಪುರಾತನ ಉಬ್ಬು ಶಿಲ್ಪವಾಗಿದೆ. ಜೊತೆಗೆ ಶಿಲ್ಪವು ಚಾಲುಕ್ಯರು ಮತ್ತು ದೇವಗಿರಿ ಯಾದವರ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿದೆ ಎಂದು ಇತಿಹಾಸಕಾರ ಇಂಗಳೆ ತಿಳಿಸಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST