LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂದಗಿ ಪುರಸಭೆ ಅಧ್ಯಕ್ಷರಾಗಿ ಮನಗೂಳಿ, ಉಪಾಧ್ಯಕ್ಷರಾಗಿ ಚೌರ ಆಯ್ಕೆ

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪುರಸಭೆ ಅಧ್ಯಕ್ಷರಾಗಿ ಡಾ.ಶಾಂತವೀರ ಮನಗೂಳಿ, ಉಪಾಧ್ಯಕ್ಷರಾಗಿ ಸಂದೀಪ ಚೌರ ಅವಿರೋಧವಾಗಿ ಆಯ್ಕೆ ಆದರು. ಬುಧವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಹಾಸೀಂಪೀರ ಆಳಂದ ಮೊದಲು ಅರ್ಜಿ ಸಲ್ಲಿಸಿದ್ದರು. ನಂತರ ನಾಮಪತ್ರವನ್ನು ಹಿಂದಕ್ಕೆ ಪಡೆದರು. ಹೀಗಾಗಿ ಡಾ.ಶಾಂತವೀರ ಮನಗೂಳಿ ಅವಿರೋಧ ಆಯ್ಕೆ ಆದರು ಎಂದು ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.

'ನಮ್ಮನ್ನು ಆಯ್ಕೆ ಮಾಡಿದ ಸದಸ್ಯರಿಗೆ ಧನ್ಯವಾದಗಳು. ಪಟ್ಟಣದ ಅಭಿವೃದ್ಧಿಗೆ ಉಳಿದಿರುವ ಸಮಯದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಶಾಸಕರ ಸಹಕಾರೊಂದಿಗೆ ಅನುದಾನ ತೆಗೆದುಕೊಂಡು ಬಂದು ಅಭಿವೃದ್ಧಿ ಕೆಲಸ ಮಾಡಲಾಗುವುದು'. ಡಾ.ಶಾಂತವೀರ ಮನಗೂಳಿ, ಪುರಸಭೆ ನೂತನ ಅಧ್ಯಕ್ಷರು


ಈ ಹಿಂದೆ ಅಧ್ಯಕ್ಷರಾಗಿದ್ದ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ವಿರುದ್ಧ ಅವಿಶ್ವಾಸ ಮಂಡಿಸಲಾಯಿತು. ಹೀಗಾಗಿ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಚುನಾವಣೆ ನಡೆಸಲಾಗಿದೆ. ಅಧ್ಯಕ್ಷ ಗಾದಿಯ ರಾಜಕೀಯ ಇನ್ನು ಮುಗಿದಿಲ್ಲವೆಂದು ಹೇಳಲಾಗುತ್ತಿದೆ. ಕೋರ್ಟ್ ಅಂಗಳದಲ್ಲಿ ಈ ವಿಚಾರವಿದ್ದು, ಜೂನ್ 6ರಂದು ವಿಚಾರಣೆ ಇದೆ ಎಂದು ಹೇಳಲಾಗುತ್ತಿದೆ. ಈ ಅವಧಿ ಮುಗಿಯಲು ಇನ್ನು 6 ತಿಂಗಳು ಇದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST