LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಉದ್ಯಮಿ ಅನುಮಾನಸ್ಪದ ಸಾವು, ಪತ್ನಿ ಸೇರಿ ಮೂವರ ಬಂಧನ

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ್ ಪದ್ಮಣ್ಣವರ(47) ಅನುಮಾನಸ್ಪದ ಸಾವು ಪ್ರಕರಣ ಸಂಬಂಧ ಪತ್ನಿ ಉಮಾ(41) ಸೇರಿದಂತೆ ಮೂವರುನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರ ಪತ್ತೆ ಕಾರ್ಯ ನಡೆದಿದೆ. ಫೇಸ್ ಬುಕ್ ಗೆಳೆಯ ಕೊಡಗು ಜಿಲ್ಲೆಯ ಶೋಭಿತಗೌಡ(30), ಪವನ್(27) ಬಂಧಿತ ಆರೋಪಿಗಳು. ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಕೊರಿಯಾ, ನಂದಿ ಕೊರಿಯಾ ಪತ್ತೆ ಕಾರ್ಯ ನಡೆದಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಪತ್ನಿ ಎಲ್ಲರನ್ನು ನಂಬಿಸಿ ಅಕ್ಟೋಬರ್ 10ರಂದು ಅಂತ್ಯ ಸಂಸ್ಕಾರ ನಡೆಸಿದ್ದರು. ಆದರೆ, ಬೆಂಗಳೂರಲ್ಲಿ ಓದುತ್ತಿದ್ದ ಇವರ ಮಗಳು ತಂದೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾಳೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಹೀಗಾಗಿ ಬುಧವಾರ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಪೊಲೀಸರು ಕಳಿಸಿದ್ದಾರೆ. ಸಂಶಯದ ಮೇಲೆ ಇವರನ್ನು ಬಂಧಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST