LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇಂಡಿ: ಯುವಕನ ಭೀಕರ ಕೊಲೆ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayara): ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬರಗುಡಿಯಲ್ಲಿ ನಡೆದಿದೆ. ಸಿದ್ರಾಮ ದೊಂಡಿಬಾ ಕ್ಷತ್ರಿ(31) ಕೊಲೆಯಾದ ಯುವಕ. ಲಚ್ಯಾಣ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿನ ಹೊಲವೊಂದರಲ್ಲಿ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಹಳೇ ವೈಷ್ಯಮದ ಕಾರಣಕ್ಕೆ ಈ ಕೃತ್ಯ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಶನಿವಾರ ರಾತ್ರಿ ಈ ಒಂದು ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆರೋಪಿಗಳಾದ ಕಾಂತಪ್ಪ ಕ್ಷತ್ರಿ, ಪರಸು ಕ್ಷತ್ರಿ, ರಜನಿಕಾಂತ ಗಿರಣಿವಡ್ಡರ, ಸರ್ಜನ ಕ್ಷತ್ರಿ ಎಂಬುವರನ್ನು ಪೊಲೀಸರು ಈಗಾಗ್ಲೇ ಬಂಧಿಸಿದ್ದಾರೆ. ಇವರು ಹಾಗೂ ಕೊಲೆಯಾದ ಯುವಕ ಸಂಬಂಧಿಕರಾಗಿದ್ದು, ಹಳೇ ವೈಷಮ್ಯಕ್ಕೆ ಕೊಲೆ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST