LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಸ್ತೆ ಅಪಘಾತ, ಮೂವರ ಸಾವು, ಮೂವರಿಗೆ ಗಾಯ

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ(Hubballi): ಲಾರಿ ಹಾಗೂ ಓಮಿನಿ(omni van) ವಾಹನದ ನಡುವೆ ಶುಕ್ರವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದಾರೆ. ಹೆಬಸೂರು ಹತ್ತಿರ ಕಳೆದ ರಾತ್ರಿ ನಡೆದಿದೆ. ಜಾಫರ್ ಸಾಬ್(64), ಇವರ ಮಗ ಮಹಮ್ಮದ್ ಮುಸ್ತಾಫಾ(38) ಹಾಗೂ ಮೊಮ್ಮಗ ಶೋಯಬ್(08) ಮೃತ ದುರ್ದೈವಿಗಳು. ಇನ್ನು ಮೂವರು ಗಾಯಗೊಂಡಿದ್ದು ಧಾರವಾಡ ಎಸ್ ಡಿಎಂ(SDM) ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾರ್ಶ್ವವಾಯು ಸಮಸ್ಯೆಯಿಂದ ಬಳುತ್ತಿದ್ದ ಜಾಫರ್ ಸಾಬ್ ಅವರ ಚಿಕಿತ್ಸೆಗಾಗಿ ಉತ್ತರ ಕನ್ನಡ ಜಿಲ್ಲೆಯ ಅಲಗಾ ಗ್ರಾಮಕ್ಕೆ ಕಳೆದ ಎರಡು ದಿನಗಳ ಹಿಂದೆ 6 ಜನರು ಹೋಗಿದ್ದರು. ವಾಪಸ್ ಬರುವಾಗ ಈ ಘಟನೆ ನಡೆದಿದೆ. ಮೂವರನ್ನು ಕಳೆದುಕೊಂಡ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಇನ್ನೊಂದು ಕಡೆ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST