ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಕಣಿವೆನಾಡು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಲ್ಲಿ ಉಗ್ರರು ನಡೆಸಿದ ದಾಳಿಗೆ 26 ಜನರು ಮೃತಪಟ್ಟಿದ್ದಾರೆ. ಪ್ರವಾಸಕ್ಕೆ ಹೋದವರ ಬದುಕಲ್ಲಿ ಆಘಾತವೊಂದು ಕಾದಿತ್ತು. ಆ ಕರಾಳ ಘಟನೆ ಇಂದು(ಏಪ್ರಿಲ್ 22) ಒಂದು ವರ್ಷ ತುಂಬಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ಕಣ್ಣೀರು ಇನ್ನೂ ಆರಿಲ್ಲ.
ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಕಣಿವೆಯ ವಿಶಾಲ ಪ್ರದೇಶದಲ್ಲಿ ಪ್ರವಾಸಿಗರು ಖುಷಿ ಖುಷಿಯಾಗಿದ್ದರು. ಪುರುಷರನ್ನು ಗುರಿಯಾಗಿಸಿ ಗುಂಡಿನ ಸುರಿಮಳೆ ಸುರಿಸಲಾಗಿತ್ತು. ಭಯೋತ್ಪಾದಕರ ಕ್ರೌರ್ಯಕ್ಕೆ 26 ಜನರು ಮೃತಪಟ್ಟರು. ಈ ಘಟನೆಯಲ್ಲಿ 11 ಜನರ ಜೀವ ಉಳಿಸಿದ ಕಾಶ್ಮೀರಿ ಶಾಲು ವ್ಯಾಪಾರಿ ನಝಾಕತ್ ಅಲಿಗೆ ಏಪ್ರಿಲ್ 11ರಂದು ಛತ್ತೀಸಗಢ ಸರ್ಕಾರ ಸನ್ಮಾನಿಸಿದೆ. ತನ್ನ ರಾಜ್ಯದ ಪ್ರವಾಸಿಗರನ್ನು ಉಳಿಸಿದೆ ಅಲಿಗೆ ರಾಯಪುರದಲ್ಲಿ ಸನ್ಮಾನಿಸಲಾಗಿದೆ.




