Ad imageAd image

ಮುಂಬೈ: ಬಿಜೆಪಿ ರ್ಯಾಲಿಯಿಂದ ಟ್ರಾಫಿಕ್, ಸಚಿವರನ್ನು ಗೆಟ್ ಔಟ್ ಎಂದ ಮಹಿಳೆ

Nagesh Talawar
ಮುಂಬೈ: ಬಿಜೆಪಿ ರ್ಯಾಲಿಯಿಂದ ಟ್ರಾಫಿಕ್, ಸಚಿವರನ್ನು ಗೆಟ್ ಔಟ್ ಎಂದ ಮಹಿಳೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮುಂಬೈ(Mumbai): ಮಹಿಳಾ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಬಿಜೆಪಿ ರ್ಯಾಲಿಯನ್ನು ಆಯೋಜಿಸಿದೆ. ಇದರಿಂದಾಗಿ ಮುಂಬೈ ನಗರದ ವೊರ್ಲಿ ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆಯಾಗಿದೆ. ಈ ವೇಳೆ ರೊಚ್ಚಿಗೆದ್ದ ಮಹಿಳೆಯೊಬ್ಬರು ಸಚಿವರನ್ನು ನಿಮ್ಮಿಂದ ಟ್ರಾಫಿಕ್ ಸಮಸ್ಯೆಯಾಗಿದೆ. ಸಂಚಾರಕ್ಕೆ ತೊಂದರೆ ಮಾಡುವ ಬದಲು ಮೈದಾನದಲ್ಲಿ ಮಾಡಬೇಕಿತ್ತು. ಗೆಟ್ ಔಟ್ ಫ್ರಂ ಹಿಯರ್ ಎಂದು ಸಚಿವ ಗಿರೀಶ್ ಮಹಾಜನ್ ವಿರುದ್ಧ ಕಿಡಿ ಕಾರಿದ್ದಾಳೆ.

ಸಚಿವರು ಹಾಗೂ ಪೊಲೀಸರು ಮಹಿಳೆಯನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ನಿಮ್ಮಿಂದ ನೂರಾರು ಜನರು ಕಾಯುತ್ತಿದ್ದಾರೆ. ಇದು ನಿಮಗೆ ಅರ್ಥವಾಗುತ್ತಿಲ್ಲವೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಕಾಂಗ್ರೆಸ್ ಘಟಕ ಈ ವಿಡಿಯೋ ಹಂಚಿಕೊಂಡಿದೆ. ಆಡಳಿತ ಪಕ್ಷದ ಅಭಿಯಾನದ ನಿಜವಾದ ಮುಖವನ್ನು ಇದು ಬಹಿರಂಗ ಪಡಿಸುತ್ತದೆ ಎಂದಿದ್ದಾರೆ.

WhatsApp Group Join Now
Telegram Group Join Now
Share This Article