Ad imageAd image

ಕಬಿನಿ ಹಿನ್ನೀರಿನಲ್ಲಿ ಮುಳುಗಿ ಅರಣ್ಯ ರಕ್ಷಕ ಸಾವು

Nagesh Talawar
ಕಬಿನಿ ಹಿನ್ನೀರಿನಲ್ಲಿ ಮುಳುಗಿ ಅರಣ್ಯ ರಕ್ಷಕ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮೈಸೂರು(Mysore): ರಾತ್ರಿ ಪಾಳೆಯದ ಕೆಲಸ ಮುಗಿಸಿ ಬುಧವಾರ ಮುಂಜಾನೆ ಸಹದ್ಯೋಗಿಗಳ ಜೊತೆಗೆ ಕಬಿನಿ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಫಾರೆಸ್ಟ್ ರೇಂಜರ್ ಮೃತಪಟ್ಟಿರುವ ಘಟನೆ ಎಚ್.ಡಿ ಕೋಟೆ ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ನಡೆದಿದೆ. ಅಂಕನಾಥಪುರ ಗ್ರಾಮದ ಸುಪ್ರೀತ್(36) ಮೃತ ದುರ್ದೈವಿ ಆಗಿದ್ದಾರೆ.

ಸಹದ್ಯೋಗಿಗಳಾದ ಅಯ್ಯಪ್ಪ ಹಾಗೂ ಅಮನ್ ಜೊತೆಗೆ ಸುಪ್ರೀತ್ ಬುಧವಾರ ಮುಂಜಾನೆ ಈಜಲು ಹೋಗಿದ್ದಾರೆ. ಆದರೆ, ಈಜುತ್ತಿದ್ದಾಗ ಸುಸ್ತು ಕಾಣಿಸಿಕೊಂಡಿದೆ. ಹೀಗಾಗಿ ದಡಕ್ಕೆ ಬರಲು ನೋಡಿದ್ದಾರೆ. ಆಗಿಲ್ಲವಂತೆ. ಹೀಗಾಗಿ ನೀರಿನಲ್ಲಿ ಮುಳುಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ತೀವ್ರ ಹುಡುಕಾಟದ ಬಳಿಕ ಗುರುವಾರ ಮುಂಜಾನೆ ಮೃತದೇಹ ಪತ್ತೆಯಾಗಿದೆ.

WhatsApp Group Join Now
Telegram Group Join Now
Share This Article