Ad imageAd image

ಸಂಜು ಶತಕದ ಅಬ್ಬರ.. ಮುಂಬೈ ಹೀನಾಯ ಸೋಲು

Nagesh Talawar
ಸಂಜು ಶತಕದ ಅಬ್ಬರ.. ಮುಂಬೈ ಹೀನಾಯ ಸೋಲು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮುಂಬೈ(Mumbai): ಇಲ್ಲಿನ ವಾಂಖಡೆ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈ ತಂಡದ ಆಟಗಾರ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಅಬ್ಬರದ ಶತಕ ಸಿಡಿಸಿದ್ದಾರೆ. ಟಾಸ್ ಗೆದ್ದ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಸಿಎಸ್ಕೆ ಮೊದಲು ಬ್ಯಾಟ್ ಮಾಡಿ 6 ವಿಕೆಟ್ 207 ರನ್ ಗಳಿಸಿತು.

6 ಸಿಕ್ಸ್, 10 ಫೋರ್ ಗಳೊಂದಿಗೆ 54 ಬೌಲ್ ಗಳಲ್ಲಿ ಅಜೇಯ 101 ರನ್ ಗಳಿಸಿದ ಸಂಜು ಸ್ಯಾಮ್ಸನ್ ಮತ್ತೆ ಮಿಂಚಿದರು. ಒಂದೇ ಸರಣಿಯಲ್ಲಿ ಎರಡು ಶತಕ ದಾಖಲಿಸಿದರು. ನಾಯಕ ಋತುರಾಜ್ ಗಾಯಕ್ವಾಡ್ 22, ಬ್ರೇವಿಸ್ 21 ರನ್ ಗಳಿಸಿದರು. ಆದರೆ, ಉಳಿದವರಿಂದ ಹೆಚ್ಚು ರನ್ ಬರಲಿಲ್ಲ. ಇದರಿಂದಾಗಿ ಇನ್ನು ಹೆಚ್ಚಿನ ರನ್ ಗಳಿಸುವ ಸಾಧ್ಯತೆಯನ್ನು ಸಿಎಸ್ಕೆ ಕಳೆದುಕೊಂಡಿತು. ಅಂತಿಮವಾಗಿ 20 ಓವರ್ ಗಳಲ್ಲಿ 6 ವಿಕೆಟ್ ಗೆ 207 ರನ್ ಗಳಿಸಿತು. ಮುಂಬೈ ಪರ ಅಲ್ಲಾ ಘಝನಪರ್ ಹಾಗೂ ಅಶ್ವಿನಿಕುಮಾರ್ ತಲಾ 2 ವಿಕೆಟ್ ಪಡೆದರು. ಬೂಮ್ರಾ, ಸ್ಯಾಟ್ನರ್ ತಲಾ 1 ವಿಕೆಟ್ ತೆಗೆದರು.

208 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ ತಂಡದಿಂದ ನಿರಸ ಪ್ರದರ್ಶನ ವ್ಯಕ್ತವಾಯಿತು. ಸಿಎಸ್ಕೆ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಅಕೇಲ್ ಹೊಸೇನ್ ಮುಂಬೈ ಆಟಗಾರರನ್ನು ಕಾಡಿದರು. ಡಿಕಾಕ್ 7, ದಿನೇಶ್ ಮಲ್ವಿಆರ್ 0, ನಮನ್ ಧೀರ್ 0, ಸೂರ್ಯಕುಮಾರ್ ಯಾದವ್ 36, ಹಿಂದಿನ ಪಂದ್ಯದಲ್ಲಿ ಮಿಂಚಿದ್ದ ತಿಲಕ್ ವರ್ಮಾ 37, ನಾಯಕ ಹಾರ್ದಿಕ್ ಪಾಂಡ್ಯೆ 1, ರೌತರ್ ಪೋರ್ಡ್ 0, ಶ್ರಾದೂಲ್ ಠಾಕೂರ್ 6, ಕಿಶನ್ ಭಗತ್ 7, ಬೂಮ್ರಾ 2 ರನ್ ಗಳಿಸಿ ಔಟ್ ಆದರು. ಹೀಗಾಗಿ 19 ಓವರ ಗಳಲ್ಲಿ ಕೇವಲ 104 ರನ್ ಗಳಿಗೆ ಮುಂಬೈ ಆಲೌಟ್ ಆಯಿತು. ಸಿಎಸ್ಕೆ ಭರ್ಜರಿ 103 ರನ್ ಗಳಿಂದ ವಿಜಯ ಸಾಧಿಸಿತು. ಅಕೇಲ್ ಹೊಸೇನ್ 4 ವಿಕೆಟ್ ಪಡೆದು ಮಿಂಚಿದರು. ನೂರ್ ಅಹ್ಮದ್ 2, ಮುಖೇಶ್ ಚೌಧರಿ, ಕಂಬೋಜ್, ಓವರ್ ಟನ್, ಗುರ್ಜನ್ ಪ್ರೀತ್ ಸಿಂಗ್ ತಲಾ 1 ವಿಕೆಟ್ ಪಡೆದರು.

WhatsApp Group Join Now
Telegram Group Join Now
Share This Article