ಪ್ರಜಾಸ್ತ್ರ ಸುದ್ದಿ
ಸೊರಬ(Soraba): ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿಗೆ ಗ್ರೇಡ್ ಬದಲು ಅಂಕ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಅಂಕ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಹೀಗಾಗಿ ಅಂಕ ನೀಡಲಾಗುವುದು ಎಂದು ಬುಧವಾರ ತಿಳಿಸಿದ್ದಾರೆ. ಬಂಗಾರಧಾಮದಲ್ಲಿ ತಾಯಿ ಶಕುಂತಲಾ ಬಂಗಾರಪ್ಪನವರ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಸಮಾಧಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹಿಂದಿ ಕಡ್ಡಾಯವಲ್ಲ ಎಂದು ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು. ಈ ಮೂಲಕ ಕನ್ನಡ ಪರ ನಿಲ್ಲಲು ಸರ್ಕಾರ ಈ ತೀರ್ಮಾನ ಕೈಗೊಂಡಿತ್ತು ಹೊರತು ಹಿಂದಿ ವಿರೋಧಿ ಅಲ್ಲ. ಆದರೆ, ಹೈಕೋರ್ಟ್ ಆದೇಶವನ್ನು ಸರ್ಕಾರ ಸ್ವಾಗತಿಸುತ್ತದೆ. ಈ ಬಾರಿ ಗ್ರೇಡ್ ಬದಲು ಅಂಕ ನೀಡಲಾಗುವುದು ಎಂದರು.




