LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯುವ ನಟ ವಿಶ್ವಪ್ರಕಾಶಗೆ ಬೆಸ್ಟ್ ಆಕ್ಟರ್ ಪ್ರಶಸ್ತಿ

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ವಿಜಯಪುರ(Vijayapura): ಕರುನಾಡು ಕಿರುಚಿತ್ರೋತ್ಸವದಲ್ಲಿ ಯುವ ನಟ ವಿಶ್ವಪ್ರಕಾಶ ಟಿ.ಮಲಗೊಂಡ ಅವರಿಗೆ ಉತ್ತಮ ನಟ (Best Actor) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕೊಪ್ಪಳದ ಜೆ.ಕೆ.ಎಸ್ ಹೊಟೇಲ್ ನಲ್ಲಿ ಜುಲೈ 21, ಭಾನುವಾರ ಕವಿತಾ ಮೀಡಿಯಾ ಸೋರ್ಸ್ ಪ್ರೈ.ಲಿ ಹೈಬ್ರೀಡ್ ನ್ಯೂಸ್ ಆಯೋಜಿಸಿದ್ದ ಕರುನಾಡ ಕಿರುಚಿತ್ರೋತ್ಸವದಲ್ಲಿ(Short Film Festival) ನಟ ವಿಶ್ವಪ್ರಕಾಶ ಟಿ.ಮಲಗೊಂಡ ನಟನೆಯ ‘ತುಷಾರ್’  ಚಿತ್ರ ಭಾಗವಹಿಸಿತ್ತು. ಚಿತ್ರದಲ್ಲಿನ ಇವರ ನಟನೆಗೆ 2024ನೇ ಸಾಲಿನ ‘ಸಿನಿ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕಿರುಚಿತ್ರೋತ್ಸವದಲ್ಲಿ ಹಿರಿಯ ಚಲನಚಿತ್ರ ಸಾಹಿತಿ ಹಾಗೂ ಕಿರುಚಿತ್ರೋತ್ಸವದ ಅಧ್ಯಕ್ಷ ಮಹಾಂತೇಶ ಮಲ್ಲನಗೌಡರ, ಶಿವಮ್ಮ(Shivamma Film) ಚಲನಚಿತ್ರ ಖ್ಯಾತಿಯ ಶಿವಮ್ಮ ಯರೆಹಂಚಿನಾಳ, ಚಲನಚಿತ್ರ ನಿರ್ದೇಶಕ ಬಸವರಾಜ ಕೊಪ್ಪಳ, ಅಳವಂಡಿ ಪಿಎಸ್ಐ ನಾಗಪ್ಪ.ಕೆ, ಹಿರಿಯ ಪತ್ರಕರ್ತ ಜಿ ಎಸ್.ಗೋನಾಳ, ಸಿನಿಮಾ ಪತ್ರಕರ್ತ ಬಸವರಾಜ ಕರುಗಲ್, ಸಾಹಿತಿ ಸುರೇಶ ಕಂಬಳಿ, ಪ್ರಾಧ್ಯಾಪಕ ಶರಣಪ್ಪ ಬಿಳಿಯಲಿ, ಸಮಾಜ ಸೇವಕಿ ಶಾರದಾ ಪಾನಘಂಟಿ, ಉಪನ್ಯಾಸಕ ಡಾ.ಸಿದ್ದಲಿಂಗಪ್ಫ ಕೋಟ್ನೆಕಲ್, ಹೈಬ್ರೀಡ್ ನ್ಯೂಸ್ ಸಂಸ್ಥಾಪಕ ಹಾಗೂ ಕಿರುಚಿತ್ರೋತ್ಸವ ಆಯೋಜಕ ಡಾ.ಬಿ ಎನ್.ಹೊರಪೇಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST