LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದರ್ಶನ್, ಪವಿತ್ರಾಗೌಡಗೆ ಇನ್ನೂ ಜೈಲು ಗತಿ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾಗೌಡ ಹಾಗೂ ಎ2 ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ ಮಾಡಲಾಗಿದೆ. 57ನೇ ಸಿಸಿಎಚ್(CCH Court) ಕೋರ್ಟ್ ಅಕ್ಟೋಬರ್ 4ಕ್ಕೆ ನಟ ದರ್ಶನ್ ಜಾಮೀನು ಅರ್ಜಿ ಮುಂದೂಡಿದೆ. ಇನ್ನು ಎ1 ಆರೋಪಿ ಪವಿತ್ರಾಗೌಡ ಜಾಮೀನು(Bail) ಅರ್ಜಿ ಸಹ ಅಕ್ಟೋಬರ್ 4ಕ್ಕೆ ಮುಂದೂಡಿದೆ. ಈ ಮೂಲಕ ಇವರಿಗೆ ಸಧ್ಯಕ್ಕೆ ಬಿಡುಗಡೆ ಭಾಗ್ಯ ಸಿಗುತ್ತಿಲ್ಲ.

ನಟ ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್(C.V Nagesh) ಅವರು ವಾದ ಮಂಡಿಸಲು ಸಮಯ ಕೇಳಿದ್ದಾರೆ. ಹೀಗಾಗಿ ಜಾಮೀನು ಅರ್ಜಿಯನ್ನು ಮುಂದೂಡಲಾಗಿದೆ. ಕಳೆದ ಮೂರು ತಿಂಗಳಿಗೂ ಅಧಿಕ ದಿನಗಳಿಂದ ನಟ ದರ್ಶನ್ ಜೈಲಿನಲ್ಲಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿಗೆ ಸ್ಥಳಾಂತರಗೊಂಡ ಬಹುದಿನಗಳಾಗುತ್ತಿವೆ. ಈ ಪ್ರಕರಣದಲ್ಲಿ 15, 16 ಹಾಗೂ 17ನೇ ಆರೋಪಿಗಳಿಗೆ ಈಗಾಗ್ಲೇ ಜಾಮೀನು ಸಿಕ್ಕಿದೆ. ಆದರೆ, ಶ್ಯೂರಿಟಿ ಇಲ್ಲದ ಕಾರಣಕ್ಕೆ ಅವರ ಇನ್ನು ತುಮಕೂರು ಜೈಲಿನಿಂದ ಹೊರ ಬಂದಿಲ್ಲ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST