LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನನಗೆ ಯಾವುದೇ ಅಶ್ಲೀಲ ಮೆಸೇಜ್ ಬಂದಿಲ್ಲ: ನಟಿ ರಾಗಿಣಿ

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕೊಲೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಬರೀ ಪವಿತ್ರಾಗೌಡಗೆ ಮಾತ್ರ ಅಶ್ಲೀಲ ಮೆಸೇಜ್ ಕಳಿಸಿಲ್ಲ. 200ಕ್ಕೂ ಹೆಚ್ಚು ಜನರಿಗೆ ಕಳಿಸಿದ್ದ ಎನ್ನಲಾಗುತ್ತಿದೆ. ನಟ ದರ್ಶನ್(D Boss) ಸೇರಿ 17 ಆರೋಪಿಗಳ ವಿರುದ್ಧ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ನಟಿಯರಾದ ರಾಗಿಣಿ, ಶುಭಾ ಪೂಂಜಾ ಹೆಸರು ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ, ತನಗೆ ಯಾವುದೇ ರೀತಿಯ ಅಶ್ಲೀಲ ಮೆಸೇಜ್ ಬಂದಿಲ್ಲ ಎಂದು ನಟಿ ರಾಗಿಣಿ ಹೇಳಿದ್ದಾರೆ.

ರೇಣುಕಾಸ್ವಾಮಿಯಿಂದ ನನಗೆ ಅಶ್ಲೀಲ ಮೆಸೇಜ್ ಬಂದಿದೆ ಎನ್ನುವ ಅಂಶ ಚಾರ್ಜ್ ಶೀಟ್ ನಲ್ಲಿದೆ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ, ನನಗೆ ಯಾವುದೇ ಮೆಸೇಜ್ ಬಂದಿಲ್ಲ. ತೀರ ಸಣ್ಣ ವಿಚಾರವಿದು. ಎಲ್ಲದಕ್ಕೂ ನಮ್ಮ ಹೆಸರನ್ನು ಜೋಡಿಸುವುದು ಸರಿಯಲ್ಲ ಎಂದು ನಟಿ ರಾಗಿಣಿ(ragini dwivedi) ಹೇಳಿದ್ದಾರೆ. ಇನ್ನು ನಟಿ ಶುಭಾ ಪೂಂಜಾ ಹೆಸರು ಸಹ ಕೇಳಿ ಬರುತ್ತಿದ್ದು, ಅವರಿಗೆ ಮೆಸೇಜ್ ಕಳಿಸಿದ್ನಾ ಇಲ್ವಾ ಅನ್ನೋದು ದೃಢವಾಗಬೇಕಿದೆ. ಚಾರ್ಜ್ ಶೀಟ್ ನಲ್ಲಿರುವ ವಿಚಾರಗಳ ಬಗ್ಗೆ ವರದಿ ಮಾಡಬಾರದು ಎಂದು ಹೈಕೋರ್ಟ್ ನಿರ್ಬಂಧ ಹೇರಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST