ಪ್ರಜಾಸ್ತ್ರ ಸುದ್ದಿ
ಐದು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಕೊನೆಯ ಹಂತದಲ್ಲಿ ಇಟಲಿ ಪ್ರಧಾನಿ ಮೆಲೋನಿ ಅವರೊಂದಿಗೆ ರೋಮ್ ನಗರ ಸುತ್ತಾಟ ನಡೆಸಿದ್ದಾರೆ. ಇಟಲಿ ಪ್ರಧಾನಿ ಹಾಗೂ ಅನಿವಾಸಿ ಭಾರತೀಯರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಮಂಗಳವಾರ ರಾತ್ರಿ ಭೋಜನ ಮಾಡಿದರು. ಐತಿಹಾಸಿಕ ಕೊಲೋಸಿಯಮ್ ಸ್ಮಾರಕಕ್ಕೆ ಭೇಟಿ ನೀಡಿದರು.
ಇನ್ನು ಸಾಮಾಜಿಕ ಜಾಲತಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವುದು ಭಾರತ ಪ್ರಧಾನಿ ಮೋದಿ, ಇಟಲಿ ಪ್ರಧಾನಿ ಮೆಲೋನಿ ಅವರ ರೋಮ್ ನಗರ ಸುತ್ತಾಟದ ಫೋಟೋಗಳು ಹಾಗೂ ಮೆಲೋನಿ ಅವರಿಗೆ ಮೋದಿ ನೀಡಿರುವ ಮೆಲೋಡಿ ಚಾಕಲೇಟ್ ಉಡುಗರೆ. ಈ ಹಿಂದೆ ಬ್ರೆಜಿನಲ್ಲಿ ನಡೆದ ಶೃಂಗಸಭೆಯಲ್ಲಿ, ದುಬೈನಲ್ಲಿ ನಡೆದ ವಿಶ್ವಸಂಸ್ಥೆಯ ಸಿಒಸಿ 28 ಹವಾಮಾನ ಶೃಂಗಸಭೆಯಲ್ಲಿಯೂ ಸೆಲ್ಫಿಗೆ ಪೋಸ್ ಮಾಡಿದ್ದರು.
ಚಾಕಲೇಟ್ ತಂದಿರುವುದಕ್ಕೆ ಮೆಲೋನಿ ಧನ್ಯವಾದಗಳನ್ನು ಹೇಳಿದ್ದಾರೆ. ಈ ವಿಡಿಯೋ ಸಹ ಸಾಕಷ್ಟು ವೈರಲ್ ಆಗಿದೆ. ಮೋದಿ ಹಾಗೂ ಮೆಲೋನಿ ಹೆಸರು ಸೇರಿಸಿ ಮೆಲೋಡಿ ಎಂದೇ ಟ್ರೆಂಡ್ ಆಗಿದೆ.



