ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮಹಿಳೆಯೊಬ್ಬರಿಗೆ ಇತ್ತೀಚೆಗೆ ಅವರ ಗಂಡ ಉಡುಗೊರೆ ನೀಡಿದ ಓಲಾ(Ola electric scooter) ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಸಾಕಷ್ಟು ಸಮಸ್ಯೆ ಕಂಡು ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಓಲಾ ತಗೊಂಡ್ರೆ ನಿಮ್ಮ ಜೀವನ ಗೋಳು ಎಂದು ಬೋರ್ಡ್ ಬರೆದು ಅದನ್ನು ತಮ್ಮ ಗಾಡಿಗೆ ನೇತಾಹಕಿದ್ದಾರೆ. ಅದರ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಓಲಾ ಎಲೆಕ್ಟ್ರಿಕ್ ವಿರುದ್ಧ ನಾನು ಜಾಗೃತಿ ಮೂಡಿಸುತ್ತಿದ್ದೇನೆ. ದಯವಿಟ್ಟು ಯಾರೂ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬೇಡಿ. ನಾನು ಹತಾಶೆಗೊಂಡ ಓಲಾ ಗ್ರಾಹಕಿ ಎಂದು ಬರೆದುಕೊಂಡಿದ್ದಾರೆ. ನಿಶಾ ಗೌರಿ ಎನ್ನುವ ಎಕ್ಸ್ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಲಾಗಿದೆ. ಸೆಕ್ಷನ್ 35ರ ಗ್ರಾಹಕ ರಕ್ಷಣಾ ಕಾಯಿದೆ 2019ರ ಅಡಿಯಲ್ಲಿ ಬೆಂಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವಿಭಾಗದಲ್ಲಿ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಓಲಾ ಕಂಪನಿಗೆ ನೋಟಿಸ್ ನೀಡಲಾಗಿದೆಯಂತೆ. ಇನ್ನು ಇತ್ತೀಚೆಗೆ ಕಲಬುರಗಿಯಲ್ಲಿ(Kalaburagi) ಓಲಾ ಸ್ಕೂಟರ್ ಸಮಸ್ಯೆಯಿಂದ ಸ್ಕೂಟರ್ ಶೋರೂಂಗೆ ಬೆಂಕಿ ಹಚ್ಚಿದ್ದಾನೆ. ಮೊದಲು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಎನ್ನಲಾಗಿತ್ತು. ನಂತರ ಗೊತ್ತಾಗಿದ್ದೆ ಬೇರೆ.
https://twitter.com/Nisha_gowru/status/1834121883794768357



