LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಯಿ ಪಲ್ಲವಿ ಅಭಿಮಾನಿಗಳಿಂದ ಫೋನ್, ನಿರ್ದೇಶಕರಿಗೆ ಬಂತು ನೋಟಿಸ್

ಪ್ರಜಾಸ್ತ್ರ ಸುದ್ದಿ

ಚೆನ್ನೈ(Channai): ಕೆಲ ಸಿನಿಮಾದಲ್ಲಿನ ದೃಶ್ಯಗಳು ಕೆಲವೊಮ್ಮೆ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುತ್ತವೆ. ಇದೀಗ ನಟ ಶಿವಕಾರ್ತಿಕೇಯನ್ ಹಾಗೂ ನಟಿ ಸಾಯಿ ಪಲ್ಲವಿ ನಟಿಸಿರುವ ಅಮರನ್(Amaran Movie) ಚಿತ್ರದ ನಿರ್ಮಾಪಕರಿಗೆ 1.1 ಕೋಟಿ ರೂಪಾಯಿ ಪರಿಹಾರದ ಲೀಗಲ್ ನೋಟಿಸ್ ಬಂದಿದೆ. ಇದಕ್ಕೆ ಕಾರಣವಾಗಿದ್ದು, ಸಿನಿಮಾದಲ್ಲಿ ಬಳಸಿದ ಫೋನ್ ನಂಬರ್. ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಅಮರನ್ ಚಿತ್ರದಲ್ಲಿ ನಟಿ ಸಾಯಿ ಪಲ್ಲವಿ ಮೊಬೈಲ್(Mobile) ನಂಬರ್ ವೊಂದನ್ನು ಬರೆದು ನಟ ಶಿವಕಾರ್ತಿಕೇಯನ್ ಗೆ ಕೊಡುವ ದೃಶ್ಯವಿದೆ. ಅಲ್ಲಿ ಬರೆದಿರುವ ನಂಬರ್ ಅಸಲಿಗೆ ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿಯದ್ದು ಆಗಿದೆಯಂತೆ.

ಚೆನ್ನೈನಲ್ಲಿ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಯೊಬ್ಬ, ಮೊದಲು ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದು ನಿರ್ದೇಶಕರ ರಾಜಕುಮಾರ್ ಪೆರಿಯಾಸ್ವಾಮಿ(Rajakumar Periasamy) ಹಾಗೂ ನಟ ಶಿವಕಾರ್ತಿಕೇಯನ್ ಅವರಿಗೆ ಟ್ಯಾಗ್ ಮಾಡಿದ್ದಾನಂತೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬರೆದ ಹೋದಾಗ ಲೀಗಲ್ ನೋಟಿಸ್ ಕಳಿಸಿದ್ದಾನೆ. 1.1 ಕೋಟಿ(Crore) ರೂಪಾಯಿ ಪರಿಹಾರ ಹಾಗೂ ಚಿತ್ರದಲ್ಲಿ ತಮ್ಮ ಮೊಬೈಲ್ ನಂಬರ್ ತೆಗೆದು ಹಾಕುವ ಕುರಿತು ಕೇಳಿಕೊಂಡಿದ್ದಾನೆ. ಸಾಯಿ ಪಲ್ಲವಿ ಅಭಿಮಾನಿಗಳಿಂದ ನಿರಂತರ ಕಾಲ್ ಬರುತ್ತಿದ್ದು ನನಗೆ ಮಾನಸಿಕ ಕಿರುಕುಳವಾಗುತ್ತಿದೆ. ಆ ನಂಬರ್ ನನ್ನ ಬ್ಯಾಂಕ್ ಅಕೌಂಟ್, ಆಧಾರ್ ಕಾರ್ಡ್ ಎಲ್ಲದಕ್ಕೂ ಲಿಂಕ್ ಇದ್ದು ತೆಗೆದು ಹಾಕಲು ಆಗುತ್ತಿಲ್ಲವೆಂದು ಹೇಳಿದ್ದಾನೆ ಎಂದು ವರದಿಯಾಗಿದೆ.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST