ಪ್ರಜಾಸ್ತ್ರ ಸುದ್ದಿ
ಇವತ್ತಿನ ಟೆಕ್ನಾಲಜಿ ಪ್ರಪಂಚದಲ್ಲಿ ಎಲ್ಲವೂ ಸಾಧ್ಯವಿದೆ ಎನ್ನುವುದು ಆಗಾಗ ತಿಳಿಯುತ್ತಲೇ ಇರುತ್ತೆ. ಅದರಲ್ಲೂ ಸೆಲೆಬ್ರಿಟಿಗಳ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿಯೇ ಚರ್ಚೆಯಾಗುತ್ತೆ. ಈಗ ತಮಿಳು ನಟಿ ಓವಿಯಾ ಖಾಸಗಿ ವಿಡಿಯೋ ಲೀಕ್ ಆಗಿದೆ ಎಂದು ಸುದ್ದಿ ಹಬ್ಬಿದೆ. ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಬಳಿಕ ಒಂದಲ್ಲ ಒಂದು ವಿವಾದ ಓವಿಯಾ ವಿರುದ್ಧ ಕೇಳಿ ಬರುತ್ತಿದೆ. ಈಗ 17 ಸೆಕೆಂಡ್ ನ ಖಾಸಗಿ ವಿಡಿಯೋ ಲೀಕ್ ಆಗಿದೆ ಎನ್ನಲಾಗುತ್ತಿದೆ.
ಇದಕ್ಕೆ ಇನ್ಸ್ಟಾದಲ್ಲಿ ಪ್ರಶ್ನೆ ಮಾಡಿದವರಿಗೆ ಪ್ರತಿಕ್ರಿಯೆ ನೀಡಿರುವ ನಟಿ ಎಂಜಾಯ್ ಮಾಡಿ ಎಂದಿದ್ದಾಳೆ. ಇನ್ನೊಬ್ಬ ಪೂರ್ತಿ ವಿಡಿಯೋ ಇದೀಯಾ ಎಂದು ಕೇಳಿದ್ದಾನೆ. ಅದಕ್ಕೆ ನೆಕ್ಸ್ಟ್ ಟೈಂ ಬ್ರೋ ಎನ್ನುವ ಮೂಲಕ ಡ್ಯಾರೆಕ್ಟ್ ಹಿಟ್ ಮಾಡಿದ್ದಾಳೆ. ಇಂತಹ ಆರೋಪಗಳು ಕೇಳಿ ಬಂದಾಗ ಸಿನಿಮಾ ನಟಿಯರು ಹೆದರಿಕೊಳ್ಳುವುದು ಸಹಜ. ಅದು ನಾನಲ್ಲ. ಡೀಪ್ ಫೇಕ್ ವಿಡಿಯೋ ಎನ್ನುತ್ತಾರೆ. ಆದರೆ, ನಟಿ ಓವಿಯಾ ನೀಡಿದ ಪ್ರತಿಕ್ರಿಯೆ ಬೋಲ್ಡ್ ಆಗಿದ್ದರೂ ಸುಳ್ಳು ವಿಚಾರಗಳಿಗೆ ಐ ಡೋಂಟ್ ಕೇರ್ ಎನ್ನುವಂತಿದೆ.