ಪ್ರಜಾಸ್ತ್ರ ಸುದ್ದಿ
ಸ್ಯಾಂಡಲ್ ವುಡ್ ಅಂಗಳದಲ್ಲಿ ಮಿಸ್ಟರ್ ಫರ್ಪೆಕ್ಟ್ ಎಂದು, ತ್ಯಾಗರಾಜ ಎಂದೇ ಕರೆಸಿಕೊಳ್ಳುವ ನಟ ರಮೇಶ್(Ramesh Aravind) ಅರವಿಂದ್, ಗೋಲ್ಡನ್ ಸ್ಟಾರ್(Golden Star Ganesh) ಗಣೇಶ್ ಮತ್ತೆ ಜೊತೆಯಾಗಿ ಬರುತ್ತಿದ್ದಾರೆ. 8 ವರ್ಷಗಳ ಬಳಿಕ ಈ ಜೋಡಿ ಆನ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುತ್ತಿದೆ. ಅದುವೆ ‘ಯುವರ್ಸ್ ಸಿನ್ಸೆರ್ಲಿ ರಾಮ್’ ಎನ್ನುವ ಸಿನಿಮಾದಲ್ಲಿ ರಮೇಶ್ ಅರವಿಂದ್, ಗಣೇಶ್ ಜೊತೆಯಾಗಿ ನಟಿಸುತ್ತಿದ್ದು, ಅದರ ಟ್ರೇಲರ್ ರಿಲೀಸ್ ಆಗಿದೆ.
ಟ್ರೇಲರ್ ವಿಭಿನ್ನವಾಗಿದೆ. ರಮೇಶ್ ಅರವಿಂದ್ ಹಾಗೂ ಗಣೇಶ್ ಪಾತ್ರ ಪರಿಚಯವಾದರೂ ಆಗದಂತಿದೆ. ಮಿಲ್ಟ್ರಿ ಪಡೆಯಿದೆ. ಇವರನ್ನು ಅವರು ಹುಡುಕುತ್ತಿರುವುದು, ಸಿಕ್ಕಿ ಹಾಕಿಕೊಳ್ಳುವುದೆಲ್ಲವನ್ನೂ ತೋರಿಸಿದ್ದಾರೆ. ಇದೆಲ್ಲದರ ಹಿಂದೆ ತುಂಬಾ ನವೀರಾದ ಕಥೆಯಿದ್ದು, ನೋಡುಗರನ್ನು ಇವರು ಖಂಡಿತ ನಗಿಸುತ್ತಾರೆ, ಅಳುಸುತ್ತಾರೆ ಎನ್ನುವುದು ಇಲ್ಲಿ ಗೊತ್ತಾಗುತ್ತಿದೆ.
ಈ ಚಿತ್ರಕ್ಕೆ ವಿಖ್ಯಾತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 9 ವರ್ಷಗಳ ಹಿಂದೆ ಪುಷ್ಪಕ ವಿಮಾನ ಕಥೆ ಹೇಳಿದ್ದರು. ಅದರಲ್ಲಿಯೂ ರಮೇಶ್ ಅರವಿಂದ್ ವಿಭಿನ್ನ ಪಾತ್ರ ನಿರ್ವಹಿಸಿದ್ದರು. ಇವರ ಮಗಳಾಗಿ ನಟಿ ರಚಿತಾ ರಾಮ್ ನಟಿಸಿದ್ದರು. 8 ವರ್ಷಗಳ ಹಿಂದೆ ಸುಂದರಾಂಗ ಜಾಣ ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದರೆ ನಟ ಗಣೇಶ್ ನಟಿಸಿದ್ದರು. ಈಗ ಇವರೆಲ್ಲ ಈ ಚಿತ್ರದಲ್ಲಿ ಒಟ್ಟಾಗಿದ್ದಾರೆ. ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ಮೂಲ ಸತ್ಯ ರಾಯಲ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.