LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯಪುರ: ಕೇಂದ್ರ ತಂಡದಿಂದ ಬೆಳೆಹಾನಿ ಸಮೀಕ್ಷೆ

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಜಂಟಿ ನಿರ್ದೇಶಕರಾದ ಮಹೇಶಕುಮಾರ,ಇಸ್ರೋ ಬಾಹ್ಯಾಕಾಶ ಇಲಾಖೆಯ ಆಕಾಶ ಮೋಹನ್, ಬೆಂಗಳೂರಿನ ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರದ ಹೊನ್ನಂಬ ಅವರನ್ನೊಳಗೊಂಡ ತಂಡ ಸೋಮವಾರ ಜಿಲ್ಲೆಗೆ ಆಗಮಿಸಿ ಮುಂಗಾರು ಹಂಗಾಮಿನ ಬೆಳೆ ಹಾನಿ ಹಾಗೂ ನೈಸರ್ಗಿಕ ವಿಕೋಪದಿಂದ ಜನ, ಜಾನುವಾರು, ಆಸ್ತಿ, ಪಾಸ್ತಿ ಹಾನಿಗಳ ಕುರಿತು ಪರಿಶೀಲನೆ ನಡೆಸಿತು.

ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ತಂಡ,  ಜಿಲ್ಲೆಯಲ್ಲಿ ಮುಂಗಾರಿನಲ್ಲಿ 31,45,78 ಹೆಕ್ಟೇರ್ ಕೃಷಿ ಬೆಳೆ ಹಾಗೂ 31,692 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಎನ್‌ಡಿಆರ್‌ಎಫ್-ಎಸ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ 35,665.09 ಲಕ್ಷ ರೂಪಾಯಿ ಕೃಷಿ ಬೆಳೆ ಹಾಗೂ 44,53 ಲಕ್ಷ ರೂಪಾಯಿಗಳ ತೋಟಗಾರಿಕೆ ಬೆಳೆ ಸೇರಿದಂತೆ 40,118.09 ಲಕ್ಷ ರೂಪಾಯಿಗಳಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಪ್ರವಾಹ ಪರಿಸ್ಥಿತಿಯಿಂದ  ಜಿಲ್ಲೆಯಲ್ಲಿ  ಕಳೆದ ಜೂನ 1 ರಿಂದ ಸೆಪ್ಟೆಂಬರ್ 30ರವರೆಗಿನ ಅವಧಿಯಲ್ಲಿ 1,92,736 ಹೆಕ್ಟೇರ್ ಕಡಲೆ, 45,632 ಹೆಕ್ಟೇರ್ ಮೆಕ್ಕೆಜೋಳ, 3,264 ಹೆಕ್ಟೇರ್ ಸಜ್ಜೆ, 66,994 ಹೆಕ್ಟೇರ್ ಹತ್ತಿ, 2,274 ಹೆಕಸ್ಟೇರ್ ಸೂರ್ಯಪಾನ,231.09 ಹೆಕ್ಟೇರ್ .ಹಸಿರುಕಾಳು, 568 ಹೆಕ್ಟೇರ್ ಹೆಸರುಬೆಳೆ, 1,19,62.9 ಹೆಕ್ಟೇರ್ ಕಬ್ಬು, 6 ಹೆಕ್ಟೇರ್.ಸೋಯಾಬಿನ್, 909.19 ಹೆಕ್ಟೇರ್ ಶೇಂಗಾ ಬೆಳೆ ಸೇರಿದಂತೆ ಒಟ್ಟಾರೆ 31,45,77.59 ಹೆಕ್ಟೇರ್ ಬೆಳೆ ನಾಶವಾಗಿದೆ.

ಪ್ರವಾಹ ಪರಿಸ್ಥಿತಿ ಸೇರಿದಂತೆ ನೈಸರ್ಗಿಕ ವಿಕೋಪದಿಂದ 115.07 ಕಿ.ಮೀ ಪಿಡಬ್ಲೂಡಿ ರಸ್ತೆಗಳು 2,939.71 ಕಿ.ಮೀ. ಪಿಆರ್‌ಇಡಿ ರಸ್ತೆ, 1,557.6 ಮೀ. ವಿವಿಧ ಗ್ರಾಮಗಳ ಸೇತುವೆ, ಮೋರಿಗಳು, 506 ಶಾಲೆ-ಅಂಗನವಾಡಿಗಳ ಕಟ್ಟಡ, 1 ಪ್ರಾಥಮಿಕ ಆರೋಗ್ಯ ಕೇಂದ್ರ, ಸಣ್ಣ ನೀರಾವರಿ-ಜಿಲ್ಲಾ ಪಂಚಾಯತಿಯ 11 ಟ್ಯಾಂಕ್‌ಗಳು, ಆರ್‌ಡಬ್ಲೂಎಸ್‌ನ 61 ಕಾಮಗಾರಿಗಳು, ನಗರ ಹಾಗೂ ಗ್ರಾಮೀಣದ 1,418 ಮನೆಗಳು ಹಾಗೂ ಹೆಸ್ಕಾಂ ಇಲಾಖೆಯ 1,520 ಪೋಲ್ಸ್ ಮತ್ತು ಟ್ರಾನ್ಸ್ಫಾರ್ಮಗಳ ಹಾನಿ ಸೇರಿ ಒಟ್ಟು 36,427.72 ಲಕ್ಷ ರೂಪಾಯಿಗಳಷ್ಟು ಹಾನಿಯನ್ನು ಅಂದಾಜಿಸಲಾಗಿದೆ. ಬೆಳೆ ಹಾನಿ ಹಾಗೂ ಇತರೆ ರಸ್ತೆ, ಮನೆಗಳು, ಶಾಲೆ-ಅಂಗನವಾಡಿ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 76,545.81 ಲಕ್ಷ ರೂಪಾಯಿಗಳ ಹಾನಿಯನ್ನು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಭೀಮಾ ನದಿ ಪ್ರವಾಹದಿಂದ ಜಿಲ್ಲೆಯ ಚಡಚಣ ತಾಲೂಕಿನ 8 ಗ್ರಾಮಗಳು, ಇಂಡಿ ತಾಲೂಕಿನ 14 ಹಾಗೂ ಆಲಮೇಲ ತಾಲೂಕಿನ 8 ಗ್ರಾಮಗಳು ಪ್ರವಾಹಕ್ಕೊಳಗಾಗಿದ್ದು, ಕೃಷಿ ನದಿ ಪ್ರವಾಹದಿಂದ ಮುದ್ದೇಬಿಹಾಳ ತಾಲೂಕಿನ 9 ಗ್ರಾಮಗಳು, ನಿಡಗುಂದಿ ತಾಲೂಕಿನ 5 ಹಾಗೂ ಬಬಲೇಶ್ವರ ತಾಲೂಕಿನ 3 ಗ್ರಾಮಗಳು ಮತ್ತು ಡೋಣಿ ನದಿ ಪ್ರವಾಹದಿಂದ ತಿಕೋಟಾ ತಾಲೂಕಿನ 3 ಗ್ರಾಮಗಳು, ವಿಜಯಪುರ, ಬಬಲೇಶ್ವರ ಹಾಗೂ ಬಸವನಬಾಗೇವಾಡಿ ತಾಲೂಕಿನ  ತಲಾ ಒಂದು ಗ್ರಾಮಗಳು, ಹಾಗೂ ದೇವರಹಿಪ್ಪರಗಿ ತಾಲೂಕಿನ 4 ಮತ್ತು ತಾಳಿಕೋಟೆ ತಾಲೂಕಿನ 12 ಗ್ರಾಮಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸಿದ್ದು, ಪ್ರವಾಹದಲ್ಲಿ ಸಿಲುಕಿದ ಜನರನ್ನು ರಕ್ಷಿಸಿ, ಸುರಕ್ಷಿತವಾಗಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗಿದೆ. ಇಂಡಿ ತಾಲೂಕಿನಲ್ಲಿ 8 ಹಾಗೂ ಆಲಮೇಲ ತಾಲೂಕಿನಲ್ಲಿ 9 ಸೇರಿದಂತೆ ಒಟ್ಟು 17 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ, 220 ಕುಟುಂಬಗಳ 1027 ಜನರಿಗೆ ಆಶ್ರಯ ಒದಗಿಸಲಾಗಿದೆ ಎಂಬುದರ ಕುರಿತು ತಂಡ  ಸಮಗ್ರವಾದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ.ಕೆ, ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಶೀಲ್ದಾರ ಪ್ರಶಾಂತ ಕಡಕಭಾವಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಉಪನಿರ್ದೇಶಕ ಚಂದ್ರಕಾಂತ ಪವಾರ, ಶರಣಗೌಡ ಪಾಟೀಲ, ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಮಂಜುನಾಥ ಜಾನಮಟ್ಟಿ, ಇಂಡಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ ಮಠ, ಕೃಷಿ ಮಹಾವಿದ್ಯಾಲಯದ ವಿಜ್ಞಾನಿಗಳಾದ ಎಸ್.ಎಸ್.ಕರಭಂಟನಾಳ, ಚಂದ್ರಕಾAತ ಸೋರೇಗಾಂವ, ರೈತ ಮುಖಂಡರುಗಳಾದ ಅಣ್ಣಪ್ಪ ಖೈನೂರ, ಸುಧೀರ ಅಂಕೋಲೆ, ಸುಗಪ್ಪ ಶೆಟ್ಟಿ, ಮಹಾಸಿದ್ದ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST