LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಯಲ್ಸ್ ಎದುರು ಮುಗ್ಗರಿಸಿದ ಸಿಎಸ್ಕೆ

ಪ್ರಜಾಸ್ತ್ರ ಸುದ್ದಿ

ಗುವಾಹಟಿ(Guwahati): ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಡೆ ಹೀನಾಯ ಸೋಲು ಕಂಡಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಅವರ ಪ್ಲಾನ್ ಅನ್ನು ಬೌಲರ್ ಗಳು ಸರಿಯಾಗಿ ಕಂಪ್ಲೀಟ್ ಮಾಡಿದರು. ಹೀಗಾಗಿ 19.4 ಓವರ್ ಗಳಲ್ಲಿ 127 ರನ್ ಗಳಿಗೆ ಸಿಎಸ್ಕೆ ಪಡೆಯನ್ನು ಆಲೌಟ್ ಮಾಡಿದರು.

ಸಂಜು ಸ್ಯಾಮ್ಸನ್ 6, ನಾಯಕ ಗಾಯಕ್ವಾಡ್ 6, ಆಯುಷ್ ಮಹಾತ್ರೆ 0, ಸಾರ್ಟ್ 2, ಸರ್ಫರಾಜ್ ಖಾನ್ 17, ಕಾರ್ತಿಕ್ ಶರ್ಮಾ 18, ಶಿವಂ ದುಬೆ 6 ರನ್ ಗಳಿಗೆ ಔಟ್ ಆದರು. ಓವರ್ ಟನ್ 43 ರನ್ ಗಳಿಸಿದ್ದರಿಂದಾಗಿ ಸಿಎಸ್ಕೆ 100ರ ಗಡಿ ದಾಟಿತು. ಆರ್ ಆರ್ ಪರ ಜೋಪ್ರಾ ಆರ್ಚರ್, ಬರ್ಗರ್, ಜಡೇಜಾ ತಲಾ 2 ವಿಕೆಟ್ ಪಡೆದರು. ಬ್ರಿಜೇಶ್ ಶರ್ಮಾ, ಸಂದೀಪ ಶರ್ಮಾ, ರವಿ ಬಿಷ್ಣೋಯಿ ತಲಾ 1 ವಿಕೆಟ್ ಪಡೆದರು.

128 ರನ್ ಗಳ ಅಲ್ಪ ಗುರಿಯನ್ನು ಬೆನ್ನು ಹತ್ತಿದ ರಾಜಸ್ಥಾನ್ ರಾಯಲ್ಸ್ ತಂಡ 12.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿ ಗೆಲುವು ಸಾಧಿಸುವುದರೊಂದಿಗೆ ಶುಭಾರಂಭ ಮಾಡಿತು. ಜೈಸ್ವಾಲ್ ಅಜೇಯ 38, ಯುವ ಆಟಗಾರ ವೈಭವ್ ಸೂರ್ಯವಂಶಿ 52, ಧ್ರುವ್ ಜುರ್ಲ್ 18, ನಾಯಕ ರಿಯಾನ್ ಪರಾಗ್ ಅಜೇಯ 14 ರನ್ ಗಳಿಸಿದರು. ಸಿಎಸ್ಕೆ ಪರ ಅನಶುಲ್ ಕಂಬೊಲ್ 2 ವಿಕೆಟ್ ಪಡೆದರು. ಆರ್ ಆರ್ ಬೌಲರ್ ಬರ್ಗರ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST