LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಸವಣ್ಣವರ ಜನ್ಮಸ್ಥಳಕ್ಕೆ ಡಿಸಿ ಭೇಟಿ, ವಿವಿಧ ಕಾರ್ಯಗಳ ವೀಕ್ಷಣೆ

ಪ್ರಜಾಸ್ತ್ರ ಸುದ್ದಿ

ಬಸವನ ಬಾಗೇವಾಡಿ(Basavana Bagewadi): ವಿಶ್ವಗುರು ಬಸವಣ್ಣವರ(Basavanna) ಜನ್ಮಸ್ಥಳವಾದ ತಾಲೂಕಿನ ಇಂಗಳೇಶ್ವರ ಗ್ರಾಮಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಗುರುವಾರ ಭೇಟಿ ನೀಡಿದರು. ಇಲ್ಲಿ ಬಸವೇಶ್ವರರ ಪುತ್ಥಳಿ ನಿರ್ಮಾಣದ ಸಮೀಕ್ಷೆ ನಡೆಸಿದರು. ನಂತರ ಸ್ಮಾರಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ತಹಶೀಲ್ದಾರ್ ಅವರಿಂದ ಮಾಹಿತಿ ಪಡೆದರು.

ಇನ್ನು ಗಾವಠಾಣ ಜಾಗದಲ್ಲಿ ಬಸ್ ನಿಲ್ದಾಣ  ನಿರ್ಮಾಣ  ಕುರಿತು ಪರಿಶೀಲನೆ ನಡೆಸಿದರು. ನಿರ್ಮಾಣ ಹಂತದಲ್ಲಿರುವ ಅಂಬಿಗರ(ambigara choudayya) ಚೌಡಯ್ಯ ಸಮುದಾಯ ಭವನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಹಾಲುಭಾವಿ ಹಾಗೂ ವಿರಕ್ತಮಠದ ವಚನ ಶಿಲಾಮಂಟಪ ವೀಕ್ಷಣೆ ಮಾಡಿದರು. ಬಸವನ ಬಾಗೇವಾಡಿಯ ಮೆಗಾ ಮಾರ್ಕೆಟ್ ಮತ್ತು ನಂದಿ  ಮಾರ್ಕೆಟ್ ಗೂ ಸಹ ಭೇಟಿ ನೀಡಿದರು. ಇಲ್ಲಿನ ಇಂದಿರಾ ಕ್ಯಾಂಟೀನ್ ಗೆ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು. ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ, ಆಹಾರ ಸೇವಿಸುವ ಮೂಲಕ ಗುಣಮಟ್ಟ ಪರೀಕ್ಷಿಸಿದರು. ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement

Author
Publisher and Editor: Nagesh Talawar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST