ದೇವರ ಹಿಪ್ಪರಗಿ(Devara Hipparagi): ಹತ್ತರಿಕಿ ಗೌಡತಿ, ಬಬಲಾದಿ ಗೌಡಕಿಯ ಸೊಸಿ, ಕೊಂಡಗೂಳಿಯ ದಾಸೋಹ ಮೂರ್ತಿ ನಮ್ಮ ದೊಡ್ಡವ್ವ. ಹೊಸಮನಿ ಮಹಾಂತೇಶ, ಮತ್ತು ಬಾಬು ನದಾಫ ಅವರು ನಮ್ಮ ದೊಡ್ಡವ್ವನ ದಾಸೋಹಿ ತತ್ವಕ್ಕ ಸಾಕ್ಷಿ.
ಬ್ರಿಟೀಷ ಸಂಸ್ಥಾನ ಕೊಳ್ಳೆ ಹೊಡೆದರು, ನಮ್ಮತನ ಎತ್ತಿಹಿಡಿದ ದೊಡ್ಡವ್ವ, ಅಕ್ಷರ, ಅನ್ನ ಮತ್ತು ಆಶ್ರಯದ ದಾಸೋಹವೆ ನಮ್ಮ ತತ್ವ ಎಂದು ನಂಬಿದಾಕೆ ನಮ್ಮ ದೊಡ್ಡವ್ವ. ಯವ್ವ, ನಿನ್ನ ಆರೈಕೆ ಈಗ ಮರಿಚಿಕೆಯಾದರು, ನನ್ನ ಮನದಲ್ಲಿ ಆ ನಗು ಮಾಸದಿರಲಿ.. ನಿನ್ನ ಬದುಕಿನ ಸತ್ವವೆ ಮಕ್ಕಳ ಜೀವಾಳವಾಗಲಿ….
ಯವ್ವಾ I’m going to miss you forever… ಈಗ ಅಶುಣ್ಣನಿಂದ ಕಲಿತೀನಿ.. ಶರಣು ನಿನಗೆ ಹತ್ತರಿಕಿ ಗೌಡತಿ ನೀ ಹಿಂಗ ಹತ್ತರಿಕಿ ಗೌಡತಿ ಅಂದರ ಬೈಯ್ಯತಿ ಅಂತ ಗೊತ್ತ ಅದಾ ನನಗ, ಆದರ ನೀ ಈಗ ಇಲ್ಲ ಅನ್ನೂದ ನಂಬಲಕ್ಕ ಆದತಾ ಇಲ್ಲ
ನಿನ್ನ ಮಗ, ಬಸಣ್ಣಿ



